– ಸಂಭಾಲ್‌ನಲ್ಲಿ ಸರ್ಕಾರಿ ಜಾಗ ಒತ್ತುವರಿ ವಿರುದ್ಧ ಕ್ರಮ
ಲಕ್ನೋ: ಉತ್ತರ ಪ್ರದೇಶದ (Uttar Pradesh) ಸಂಭಾಲ್‌ನಲ್ಲಿ (Sambhal) ವಿದ್ಯುತ್ ಇಲಾಖೆಯ (Electricity Department) ಜಾಗವನ್ನು ಒತ್ತುವರಿ (Encroachments) ಮಾಡಿ ಕಟ್ಟಲಾದ ಕಟ್ಟಡಗಳ ವಿರುದ್ಧ ಪೊಲೀಸರು ಬುಲ್ಡೋಜರ್ ಕಾರ್ಯಾಚರಣೆ ನಡೆಸಿದ್ದಾರೆ.
ಕೆಲವು ನಿವಾಸಿಗಳು ಇಲಾಖೆಯ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಒತ್ತುವರಿ ಎಷ್ಟರ ಮಟ್ಟಿಗೆ ನಡೆದಿದೆ ಎಂದರೆ ವಿದ್ಯುತ್ ಕಂಬಗಳನ್ನೂ ಸೇರಿಸಿ ಕೆಲವರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಂತಹ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಉಪವಿಭಾಗಾಧಿಕಾರಿ ಸಂತೋಷ್ ತ್ರಿಪಾಠಿ (ಎಸ್‌ಡಿಒ) ಹೇಳಿದ್ದಾರೆ.
- Advertisement
ಕೆಲವರು ಸಂಪರ್ಕ ಮತ್ತು ಸರಿಯಾದ ಮೀಟರ್ ಇಲ್ಲದೆ ವಿದ್ಯುತ್ ಕಳ್ಳತನದಲ್ಲಿ ತೊಡಗಿದ್ದಾರೆ. ಸುಮಾರು 15 ವರ್ಷಗಳ ಹಿಂದೆ ಹಳೆಯ ಮೀಟರ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಅಂತಹ ಮೀಟರ್‌ಗಳು ಸಹ ಇಲ್ಲಿದ್ದು, ಅವುಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
- Advertisement
ಕಾರ್ಯಾಚರಣೆ ವೇಳೆ ಸುಮಾರು 2-3 ಮನೆಗಳಲ್ಲಿ ವಿದ್ಯುತ್ ಕದಿಯುತ್ತಿರುವುದು ಕಂಡುಬಂದಿದೆ. ತನಿಖೆಯ ನಂತರ ಒಟ್ಟು ಮನೆಗಳ ಸಂಖ್ಯೆ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಸಂಭಾಲ್ ಘಟನೆಯು ಬಿಜೆಪಿಯ ದ್ವೇಷದ ರಾಜಕೀಯದ ದುಷ್ಪರಿಣಾಮವಾಗಿದೆ ಮತ್ತು ಇದು ಶಾಂತಿಯುತ ಸಮಾಜಕ್ಕೆ ಮಾರಕವಾಗಿದೆ ಎಂದು ಕಿಡಿಕಾರಿದೆ.