ಲಕ್ನೋ: ನೃತ್ಯ (Dance) ಮನಸ್ಸಿಗೆ ಆಹ್ಲಾದ ನೀಡುವ ಕಲಾಪ್ರಕಾರ. ದೇಹದ ಚೈತನ್ಯ ಹೆಚ್ಚಿಸುವ ಜೊತೆಗೆ ಮನಸ್ಸಿನ ಉಲ್ಲಾಸವನ್ನೂ ಇಮ್ಮಡಿಯಾಗಿಸುತ್ತದೆ. ಹೀಗಾಗಿ, ಸಾಕಷ್ಟು ಮಂದಿ ಕುಣಿಯಲು ಖುಷಿಪಡುತ್ತಾರೆ. ಆದ್ರೆ ಕರ್ತವ್ಯ ನಿರತ ಪೊಲೀಸರು (Police) ವಿರಾಮದ ಸಮಯದಲ್ಲಿ ವಿಭಿನ್ನ ನೃತ್ಯಕ್ಕೆ ಹೆಜ್ಜೆಹಾಕಿದ್ದು, ಇದೀಗ ಮೆನೆಯಲ್ಲಿ ಕೂರುವಂತೆ ಮಾಡಿದೆ.
#Ayodhya: महिला सिपाहियों के द्वारा बनाया गया ‘पतली कमरिया तोरी’ पर रील। महिला सिपाहियों का विडियो हुआ वायराल। @ayodhya_police pic.twitter.com/YGn8rlj5cU
— Rahul kumar Vishwakarma (@Rahulku18382624) December 16, 2022
ಹೌದು. ಉತ್ತರಪ್ರದೇಶದ (UttarPradesh) ಅಯೋಧ್ಯೆಯ ರಾಮಜನ್ಮಭೂಮಿ ಸ್ಥಳದಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಮಹಿಳಾ ಪೊಲೀಸ್ ಪೇದೆಗಳು (Women Police Constable) ಡಾನ್ಸ್ ಮಾಡಿದ್ದಕ್ಕೆ ನಾಲ್ವರನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಟ್ರಬಲ್ ಶೂಟರ್‌ಗೆ ಈಗ ಟ್ರಬಲ್ – `ಕುಕ್ಕರ್ ಬ್ಲಾಸ್ಟ್’ ವಿವಾದದಲ್ಲಿ ಡಿಕೆಶಿ ಏಕಾಂಗಿ?
ಪೇದೆಗಳು ಭೋಜ್‌ಪುರಿ ಹಾಡಿಗೆ ಸಖತ್ ಡಾನ್ಸ್ ಮಾಡಿರುವ ವೀಡಿಯೋ ಜಾಲತಾಣದಲ್ಲಿ ಸದ್ದು (Video Viral) ಮಾಡ್ತಿದ್ದಂತೆ ನಾಲ್ವರನ್ನು ಅಮಾನತುಗೊಳಿಸಲಾಗಿದೆ. ಆದ್ರೆ ಅಮಾನತುಗೊಂಡಿರುವ ಪೇದೆಗಳು ಸಮವಸ್ತ್ರದಲ್ಲಿ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ದೀಪಿಕಾ ದಾಸ್‌ಗೆ ಚಿನ್ನದ ಚೈನ್, ಮನಸ್ಸು ಆಫರ್ ಮಾಡಿದ ಗುರೂಜಿ
ASP (ಭದ್ರತೆ) ಪಂಕಜ್ ಪಾಂಡೆ ಸಲ್ಲಿಸಿದ ತನಿಖಾ ವರದಿಯನ್ನು ಆಧರಿಸಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಜಿ.ಮುನಿರಾಜ್ ಅವರು ಕವಿತಾ ಪಟೇಲ್, ಕಾಮಿನಿ ಕುಶ್ವಾಹಾ, ಕಾಶಿಶ್ ಸಾಹ್ನಿ ಹಾಗೂ ಸಂಧ್ಯಾ ಸಿಂಗ್ ಮಹಿಳಾ ಪೇದೆಗಳನ್ನು ಅಮಾನತು ಮಾಡಿದ್ದಾರೆ.