ಲಕ್ನೋ: ಸ್ಥಳೀಯ ಪಂಚಾಯತ್ ನೀಡಿದ ತೀರ್ಪಿನಂತೆ ತನ್ನ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಮದುವೆಯಾದ ಮಹಿಳೆಗೆ ಆತ ತ್ರಿವಳಿ ತಲಾಖ್ ನೀಡಿದ ಪ್ರಕರಣ ಉತ್ತರ ಪ್ರದೇಶದ ಹಾಪೂರ್ ನಲ್ಲಿ ನಡೆದಿದೆ.
ಸ್ಥಳೀಯ ಪಂಚಾಯತ್ ಅತ್ಯಾಚಾರ ನಡೆಸಿದ ಘಟನೆ ಕುರಿತು ವಿಚಾರಣೆ ನಡೆಸಿ ಅತ್ಯಾಚಾರಿಯನ್ನೇ ಮದುವೆಯಾಗುವಂತೆ ತೀರ್ಪು ನೀಡಿತ್ತು. ಇದರಂತೆ ಅತ್ಯಾಚಾರಿ ಜೊತೆಯೇ ಸಂತ್ರಸ್ತೆಯ ವಿವಾಹ ನೆರವೇರಿಸಿದ್ದರು. ಆದರೆ ಮದುವೆಯಾದ ನಂತರ ಪತಿ ಆಕೆಗೆ ತ್ರಿವಳಿ ತಲಾಕ್ ನೀಡಿದ್ದಾನೆ ಎಂದು ಸಂತ್ರಸ್ತೆ ಮಹಿಳೆಯ ಚಿಕ್ಕಪ್ಪ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಮದುವೆಯಾದ ಬಳಿಕ ತಮ್ಮ ಮಗಳಿಗೆ ಸಾಕಷ್ಟು ಚಿತ್ರಹಿಂಸೆ ನೀಡಿದ್ದು, ನನ್ನ ಮಗಳು ಹೆಚ್ಚು ನೋವು ಅನುಭವಿಸಿದ್ದಾಳೆ ಎಂದು ಹೇಳಿದ್ದಾರೆ.
Advertisement
ಘಟನೆ ಕುರಿತು ವಿವರಿಸಿರುವ ಸಂತ್ರಸ್ತೆ, ತನ್ನನ್ನು ಪತಿ ಹಾಗೂ ಆತನ ತಂದೆ ನಿರ್ಜನಾ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಒತ್ತಾಯ ಪೂರ್ವಕವಾಗಿ ವಿಚ್ಛೇದನ ಪತ್ರಕ್ಕೆ ಸಹಿ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಅದೇ ಸ್ಥಳದಲ್ಲಿ ಮೂರು ಬಾರಿ ತಲಾಖ್ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ಘಟನೆ ಕುರಿತು ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಅನ್ವಯ ಹಪೂರ್ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
Advertisement