ನವದೆಹಲಿ: ಉತ್ತರ ಪ್ರದೇಶದ ಮಹಿಳಾ ನ್ಯಾಯಾಧೀಶರೊಬ್ಬರು (UP Judge), ಹಿರಿಯ ನ್ಯಾಯಾಧೀಶರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಕುರಿತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ (DY Chandrachud) ಅವರಿಗೆ ಪತ್ರ ಬರೆದಿರುವ ಸಂತ್ರಸ್ತೆ, ಸಾಯಲು ನನಗೆ ಅನುಮತಿ ಕೊಡಿ ಎಂದು ಕೋರಿದ್ದಾರೆ.
ನನ್ನ ಜೀವನ ಕೊನೆಗೊಳಿಸಲು ದಯವಿಟ್ಟು ನನಗೆ ಅನುಮತಿ ಕೊಡಿ ಎಂದು ಮಹಿಳಾ ನ್ಯಾಯಾಧೀಶೆ ಪತ್ರ ಬರೆದು ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿದ್ದಾರೆ. ಜಿಲ್ಲಾ ನ್ಯಾಯಾಧೀಶರು ಮತ್ತು ಅವರ ಸಹಚರರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸಂಸತ್ ಸ್ಮೋಕ್ ಬಾಂಬ್ ಕೇಸ್ – ಟಿಎಂಸಿ ಶಾಸಕನ ಜೊತೆ ಆರೋಪಿ – ಫೋಟೋ ಹರಿಬಿಟ್ಟ ಬಿಜೆಪಿ
Advertisement
Advertisement
ನನಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ನನ್ನನ್ನು ಕಸದಂತೆ ನಡೆಸಿಕೊಳ್ಳಲಾಗಿದೆ. ನಾನು ಬೇಡದ ಕೀಟದಂತೆ ಭಾವಿಸುತ್ತೇನೆ ಎಂದು ಪತ್ರದಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಪ್ರಕರಣ ಸಂಬಂಧ ವರದಿ ಕೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿ ಸೂಚನೆ ಮೇರೆಗೆ ಸುಪ್ರೀಂ ಕೋರ್ಟ್ ಸೆಕ್ರೆಟರಿ ಜನರಲ್ ಅತುಲ್ ಎಂ. ಕುರ್ಹೇಕರ್ ಅವರು ಅಲಹಾಬಾದ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದು ಮಹಿಳಾ ನ್ಯಾಯಾಧೀಶರ ಎಲ್ಲಾ ದೂರುಗಳ ಸ್ಥಿತಿಯ ಕುರಿತು ಇಂದು ಬೆಳಗ್ಗೆ ವರದಿಯನ್ನು ಕೇಳಿದ್ದಾರೆ. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ಪ್ರಕರಣ – ಮಾಸ್ಟರ್‌ಮೈಂಡ್ ಲಲಿತ್ ಬಂಧನ
Advertisement
ಜುಲೈ 2023 ರಲ್ಲಿ ಹೈಕೋರ್ಟ್‌ನ ಆಂತರಿಕ ದೂರುಗಳ ಸಮಿತಿಗೆ ದೂರು ಸಲ್ಲಿಸಿದ ನಂತರ ತನ್ನ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಮಹಿಳಾ ನ್ಯಾಯಾಧೀಶರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಆದರೆ ವಿಚಾರಣೆ ಪ್ರಹಸನದಂತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನ್ಯಾಯಯುತ ತನಿಖೆ ಖಚಿತಪಡಿಸಿಕೊಳ್ಳಲು ವಿಚಾರಣೆಯ ತಪ್ಪಿತಸ್ಥ ನ್ಯಾಯಾಧೀಶರನ್ನು ವರ್ಗಾವಣೆ ಮಾಡುವಂತೆ ತಾನು ವಿನಂತಿಸಿದ್ದೆ. ಆದರೆ ನನ್ನ ಕನಿಷ್ಠ ಪ್ರಾರ್ಥನೆಗೂ ಕಿವಿಗೊಡಲಿಲ್ಲ. ಸುಪ್ರೀಂ ಕೋರ್ಟ್ ನನ್ನ ಅರ್ಜಿಯನ್ನು ಕೇವಲ ಎಂಟು ಸೆಕೆಂಡುಗಳಲ್ಲಿ ವಜಾಗೊಳಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಮುಸ್ಲಿಂ ಶಿಲ್ಪಿಗಳಿಂದ ರೂಪುಗೊಳ್ಳುತ್ತಿದೆ ರಾಮನ ವಿಗ್ರಹ
ನನಗೆ ಇನ್ನು ಬದುಕುವ ಇಚ್ಛೆ ಇಲ್ಲ. ಇನ್ನು ಮುಂದೆ ಈ ನಿರ್ಜೀವ ದೇಹವನ್ನು ಹೊತ್ತುಕೊಂಡು ಹೋಗುವುದರಲ್ಲಿ ಯಾವುದೇ ಉದ್ದೇಶವಿಲ್ಲ. ನನ್ನ ಜೀವನದಲ್ಲಿ ಯಾವುದೇ ಆಸಕ್ತಿ ಉಳಿದಿಲ್ಲ ಎಂದು ಎರಡು ಪುಟಗಳ ಪತ್ರದಲ್ಲಿ ಮಹಿಳಾ ನ್ಯಾಯಾಧೀಶೆ ಉಲ್ಲೇಖಿಸಿದ್ದಾರೆ.