ಲಕ್ನೋ: ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಸ್ನೇಹಿತನ ಮಾತು ನಂಬಿ 32 ಲಕ್ಷ ರೂ. ಕಳೆದುಕೊಂಡ ಘಟನೆ ಉತ್ತರಪ್ರದೇಶದ ರಾಯ್ ಬರೇಲಿ ಜಿಲ್ಲೆಯ ನಡೆದಿದೆ.
Advertisement
ಯುವತಿಗೆ ಇನ್‍ಸ್ಟಾಗ್ರಾಮ್ ನಲ್ಲಿ ಯುವಕನೊಬ್ಬ ನಾನು ಯುಕೆ ನಿವಾಸಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಇದನ್ನು ನಂಬಿ ಯುವತಿಯು ಅವನ ಜೊತೆ ಸ್ನೇಹ ಬೆಳೆಸಿದ್ದಾಳೆ. ಪರಿಣಾಮ ಯುವಕ ನಿಮಗೆ 45 ಲಕ್ಷದ ಉಡುಗೊರೆಯನ್ನು ಕಳುಹಿಸುತ್ತಿದ್ದೇನೆ ಅದಕ್ಕೆ ನೀವು 32 ಲಕ್ಷ ಟ್ಯಾಕ್ಸ್ ಕಟ್ಟಬೇಕು ಎಂದು ಹೇಳಿದ್ದಾನೆ. ಉಡುಗೊರೆಗೆ ಆಸೆ ಬಿದ್ದು, ಯುವತಿ ಆತನಿಗೆ 32 ಲಕ್ಷ ರೂ. ಆನ್‍ಲೈನ್ ಮೂಲಕ ಕಳುಹಿಸಿದ್ದು, ಹಣ ಕಳುಹಿಸಿದ ನಂತರ ಯುವಕ ಈಕೆಯ ಸಂಪರ್ಕಕ್ಕೆ ಸಿಕ್ಕಿಲ್ಲ. ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ. ಇದನ್ನೂ ಓದಿ: ಥ್ರೋಬ್ಯಾಕ್ ವೀಡಿಯೋ ಎಂದು ವೈರಲ್ ವೀಡಿಯೋ ಶೇರ್ ಮಾಡಿದ ಡಿಡಬ್ಲ್ಯೂಆರ್
Advertisement
ಈ ಪರಿಣಾಮ ಯುವತಿಗೆ ತಾನು ಮೋಸ ಹೋಗಿರುವುದು ತಿಳಿದು, ರಾಯ್ ಬರೇಲಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಕುರಿತು ರಾಯ್ ಬರೇಲಿ ಪೊಲೀಸ್ ಎಸ್‍ಪಿ ಶ್ಲೋಕ್ ಕುಮಾರ್ ಮಾತನಾಡಿದ್ದು, ಯುವತಿ ಕಂತುಗಳ ಮೂಲಕ ಆನ್‍ಲೈನ್ ನಲ್ಲಿ ಹಣ ಕಳುಹಿಸಲು ಯುವಕ ಹೇಳಿದ್ದಾನೆ. ಇದನ್ನೂ ಓದಿ: ಸಿದ್ದರಾಮಯ್ಯ, ಹೆಚ್‍ಡಿಕೆ ಗೆ RSS ಸಂಸ್ಕಾರ ಗೊತ್ತಿಲ್ಲ: ಶ್ರೀರಾಮುಲು
Advertisement
Advertisement
ಯುವಕನ ಮಾತಿಗೆ ಮರುಳಾದ ಯುವತಿ ಹಣ ಕಳುಹಿಸಿದ್ದು, ಕೊನೆಯದಾಗಿ ಹಣ ಕಳುಹಿಸಿದ ನಂತರ ಈಕೆಯ ಜೊತೆ ಸಂಪರ್ಕವನ್ನು ಯುವಕ ಬಿಟ್ಟಿದ್ದಾನೆ. ಈ ಕುರಿತು ನಾವು ಮಾಹಿತಿ ತಿಳಿದುಕೊಂಡಿದ್ದು, ಸೈಬರ್ ಸೆಲ್ ಪ್ರಕರಣದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಯುವತಿ ಸೆಪ್ಟೆಂಬರ್ ನಲ್ಲಿ ಇನ್‍ಸ್ಟಾಗ್ರಾಮ್ ಮೂಲಕ ವ್ಯಕ್ತಿಯ ಪರಿಚಯವಾಗಿತ್ತು.