ಲಕ್ನೋ: ಅವಿವಾಹಿತೆ ಗರ್ಭಿಣಿಯೊಬ್ಬಳು ಯೂಟ್ಯೂಬ್‍ನಲ್ಲಿ ವಿಡಿಯೋ ನೋಡಿ ಮಗುವಿಗೆ ಜನ್ಮ ನೀಡಲು ಮುಂದಾದಾಗ ತೀವ್ರ ರಕ್ತಸ್ರಾವದಿಂದ ತಾಯಿ ಮತ್ತು ಮಗು ಮೃತಪಟ್ಟಿರುವ ಘಟನೆ ಸೋಮವಾರ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ.
ಯುವತಿ ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ. ಈ ವೇಳೆ ಮನೆಯ ಮಾಲೀಕ ಹಾಗೂ ಅಕ್ಕಪಕ್ಕದ ಮನೆಯವರು ಯುವತಿಯ ರೂಮಿನ ಹೊರಗೆ ರಕ್ತವನ್ನು ನೋಡಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸುವಾಗ ಯುವತಿಯ ಮೊಬೈಲಿನಲ್ಲಿ ವಿಡಿಯೋ ಪ್ಲೇ ಆಗುತ್ತಿತ್ತು.
Advertisement
Advertisement
ಪೊಲೀಸರ ಪ್ರಕಾರ ಯುವತಿ ಬಹರಾಯಿಚ್‍ನಲ್ಲಿ ವಾಸಿಸುತ್ತಿದ್ದಳು. ನಾಲ್ಕು ದಿನಗಳ ಹಿಂದೆಷ್ಟೇ ಆಕೆ ಗೋರಖ್‍ಪುದ ರವಿ ಉಪಾಧ್ಯಾಯ್ ಅವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಕೆಲವು ದಿನಗಳಲ್ಲಿ ನನ್ನ ತಾಯಿ ನನ್ನ ಜೊತೆ ವಾಸಿಸಲು ಬರುತ್ತಾರೆ ಎಂದು ಯುವತಿ ಮನೆ ಮಾಲೀಕನಿಗೆ ಹೇಳಿದ್ದಳು.
Advertisement
Advertisement
ಯುವತಿಯ ಕುಟುಂಬದವರು ಆಕೆಗೆ ಗರ್ಭಪಾತ ಮಾಡಿಸಬೇಕು ಎಂದುಕೊಂಡಿದ್ದರು. ಆದರೆ ಯುವತಿ ಇದಕ್ಕೆ ಒಪ್ಪಲಿಲ್ಲ. ಸಮಾಜಕ್ಕೆ ಹೆದರಿ ಯುವತಿ ಕೆಲವು ದಿನಗಳ ಹಿಂದಷ್ಟೇ ಬಚರಾಯಿಚ್‍ನಿಂದ ಗೋರಖ್‍ಪುರಕ್ಕೆ ಬಂದಿದ್ದಳು. ಗೋರಖ್‍ಪುರಕ್ಕೆ ಬಂದ ನಂತರ ಯುವತಿ ಬೇರೆ ಬೇರೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು.
ಪೊಲೀಸರು ಯುವತಿಯ ಮೊಬೈಲ್ ಪರಿಶೀಲಿಸಿ ಆಕೆಯ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಪೋಷಕರಿಗೆ ಕರೆ ಮಾಡಿದ್ದಾಗ ಯುವತಿ ಅವಿವಾಹಿತೆ ಎಂಬುದು ತಿಳಿದುಬಂದಿದೆ. ಸಾಕ್ಷಿಗಳು ನಾಶ ಆಗಬಾರದೆಂದು ಪೊಲೀಸರು ಯುವತಿ ಇದ್ದ ಕೊಠಡಿಯನ್ನು ಸೀಲ್ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv