ಲಕ್ನೋ: ಮತಾಂತರ (Conversion) ಕ್ಕೆ ಒಪ್ಪದ ಪತ್ನಿಯನ್ನು ಪ್ರತಿನಿತ್ಯ ಥಳಿಸಿ, ಸಿಗರೇಟ್ (Cigrette) ನಿಂದ ಸುಟ್ಟು ಬಲವಂತವಾಗಿ ಮಾಂಸ ತಿನ್ನಿಸಿದ ಘಟನೆಯೊಂದು ಉತ್ತರಪ್ರದೆಶ (Uttarapradesh) ಲಕ್ನೋದಲ್ಲಿ ನಡೆದಿದೆ.
ಆರೋಪಿ ಪತಿಯನ್ನು ಚಂದ್ ಮೊಹಮ್ಮದ್ (Chand Mohammad) ಎಂದು ಗುರುತಿಸಲಾಗಿದೆ. ಈತ ತಾನು ಹಿಂದೂ ಅಂತ ಹೇಳಿಕೊಂಡು ಸಂತ್ರಸ್ತೆಯನ್ನು ಮದುವೆಯಾಗಿದ್ದಾನೆ. ಆ ಬಳಿಕ ಇಬ್ಬರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಇದನ್ನೂ ಓದಿ: ಹರಿಯಾಣದ ಮಾಜಿ ಸಚಿವರ ಪುತ್ರ ವಿಷ ಸೇವಿಸಿ ಆತ್ಮಹತ್ಯೆ
Advertisement
Advertisement
ಪತಿ ನನಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ದೇಹದ ಮೇಲೆಲ್ಲ ಸಿಗರೇಟ್ನಿಂದ ಸುಟ್ಟಿದ್ದಾನೆ. ಅಲ್ಲದೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಲು ಒಪ್ಪದಿದ್ದಕ್ಕೆ ನನ್ನ ಮೇಲೆ ಬಿಸಿ ಎಣ್ಣೆ ಎರಚಿದ್ದಾನೆ. ಇಷ್ಟು ಸಾಲದೆಂಬಂತೆ ಒಂದು ವೇಳೆ ನೀನು ಮತಾಂತರಕ್ಕೆ ಒಪ್ಪದಿದ್ದರೆ ನನ್ನ ಸಂಬಂಧಿಕರಿಂದಲೇ ನಿನ್ನ ಮೇಲೆ ಅತ್ಯಾಚಾರ ಮಾಡಿಸುತ್ತೇನೆ. ಅಲ್ಲದೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಪೊಲೀಸರ ಬಳಿ ದೂರಿದ್ದಾಳೆ.
Advertisement
Advertisement
ಪ್ರತಿ ದಿನ ಪತಿಯ ಹಿಂಸೆ ತಡೆದುಕೊಳ್ಳಲು ಸಾಧ್ಯವಾಗದಿದ್ದಾಗ ದೂರು ನೀಡಲೆಂದು ಹೋದರೆ ಪತಿ ನನ್ನನ್ನು ಕೂಡಿ ಹಾಕಿ ಥಳಿಸುತ್ತಾನೆ. 5 ತಿಂಗಳ ಗರ್ಭಿಣಿ ಇದ್ದಾಗಲೂ ಆತ ನನ್ನ ಹೊಟ್ಟೆಗೆ ಹೊಡೆದಿದ್ದರಿಂದ ಗರ್ಭಪಾತವಾಗಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
ಸದ್ಯ ಮಹಿಳೆಯ ದೂರನ್ನು ಪೊಲೀಸರು ಸ್ವೀಕರಿಸಿದ್ದು, ಪತಿಯಿಂದ ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಒಂಟಿ ಮನೆ ಕಳ್ಳತನ ಮಾಡಲು ಹೋಗಿದ್ದ ಗ್ಯಾಂಗ್ಗೆ ಶಾಕ್ – ಸಿನಿಮೀಯ ರೀತಿಯಲ್ಲಿ ರೋಚಕವಾಗಿ ಸೆರೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k