– ನಿಕಾ ಹಲಾಲ್ ಗೆ ಒಪ್ಪದಿದ್ದಕ್ಕೆ ಈ ಕೃತ್ಯ
ಲಕ್ನೋ: ಮಹಿಳೆಯೊಬ್ಬಳ ಮೇಲೆ ಪತಿ ಹಾಗೂ ಆತನ ತಂದೆ ಸೇರಿದಂತೆ ಐದು ಮಂದಿ ಸಾಮೂಹಿಕ ಅತ್ಯಾಚಾರವೆಸಗಿ ನಿಕಾ ಹಲಾಲ್ ಮಾಡಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
Advertisement
ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ದೌರ್ಜನ್ಯ ನಡೆದಿದೆ ಎಂದು ಮಹಿಳೆ ತನ್ನ ಪತಿ ಹಾಗೂ ಎಂಟು ಮಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
Advertisement
Advertisement
ಘಟನೆ ವಿವರ:
ಮೋರೇದಾಬಾದ್ ಜಿಲ್ಲೆಯ ನಿವಾಸಿಯಾದ ಮಹಿಳೆ 2014 ಡಿಸೆಂಬರ್ 7 ರಂದು ವಿವಾಹವಾಗಿದ್ದಳು. ಪತಿಯ ಕಡೆಯರು ಮಹಿಳೆಗೆ ಕಿರುಕುಳ ನೀಡಿ 2015 ಡಿಸೆಂಬರ್ 25 ರಂದು ಮನೆಯಿಂದ ಹೊರಹಾಕಿದ್ದರು. ಈ ಮಧ್ಯೆ ಮತ್ತೆ 2016 ಡಿಸೆಂಬರ್ 24 ರಂದು ಎರಡು ಕುಟುಂಬಗಳ ನಡುವೆ ರಾಜಿ ಸಂಧಾನ ನಡೆದು, ಆಕೆಯನ್ನು ಮತ್ತೆ ಪತಿಯ ಮನೆಗೆ ಕಳುಹಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಪ್ರೇಮ್ ಪ್ರಕಾಶ್ ತಿಳಿಸಿದ್ದಾರೆ.
Advertisement
ಬಳಿಕ ಪತಿ ಮಹಿಳೆಗೆ ನಿಕಾ ಹಲಾಲ್‍ಗೆ ಒಪ್ಪಿಕೊಳ್ಳುವಂತೆ ಒತ್ತಾಯಿಸಿದಾಗ ಆಕೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಹೀಗಾಗಿ ಪತಿ ತಂದೆ ಕೊಠಡಿಯಲ್ಲಿ ಕೂಡಿ ಹಾಕಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಘಟನೆ ಬಳಿಕ ಮಹಿಳೆ ಕಳೆದ ವರ್ಷ ಅಕ್ಟೋಬರ್ 6 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಎಫ್‍ಐಆರ್‍ನಲ್ಲಿ ದಾಖಲಾಗಿದೆ. ಈ ಘಟನೆ ಕುರಿತು ಮಹಿಳೆ ಜಿಲ್ಲೆಯ ಮ್ಯಾಜಿಸ್ಟ್ರೇಟ್‍ರಿಗೆ ತನ್ನ ಕುಟುಂಬದವರಿಂದಲೇ ನನಗೆ ಜೀವ ಬೆದರಿಕೆಯಿದೆ ಎಂದು ಅರ್ಜಿ ಸಲ್ಲಿಸಿದ್ದು, ಸಾಮೂಹಿಕ ಅತ್ಯಾಚಾರ ಕುರಿತು ಈಗಾಗಲೇ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.
ನಿಕಾ ಹಲಾಲ ಎಂದರೇನು?:
ತಲಾಖ್ ಪಡೆದ ಬಳಿಕ ಇನ್ನೊಬ್ಬರೊಂದಿಗೆ ವಿವಾಹವಾಗಿ ದಾಂಪತ್ಯವನ್ನು ಅಂತ್ಯಗೊಳಿಸಬೇಕು. ಅಂದರೆ, ಆ ಎರಡನೇ ಮದುವೆಯನ್ನು ಮುರಿದುಕೊಂಡಾಗ ಅಥವಾ ಎರಡನೇ ಪತಿ ಮೃತಪಟ್ಟಾಗ ಮಾತ್ರ ಮೊದಲ ಪತ್ನಿಯನ್ನು ಮಹಿಳೆಯು ಪುನರ್ ವಿವಾಹವಾಗಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv