– ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಮೊದಲ ಸೂಪರ್ ಓವರ್
– ರೇಣುಕಾ ಓವರ್ 17 ರನ್ ಚಚ್ಚಿದ ಸೋಫಿ
ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನಡೆದ ಮೊದಲ ಸೂಪರ್ ಓವರ್‌ನಲ್ಲಿ (Super Over) ಯುಪಿ ವಾರಿಯರ್ಸ್ (UP Warriorz) ಆರ್‌ಸಿಬಿ ವಿರುದ್ಧ ಗೆದ್ದು ಬೀಗಿದೆ. ಸೋಫಿ ಎಕ್ಲೆಸ್ಟೋನ್ ಅವರ ಆಲ್‌ರೌಂಡರ್ ಆಟದ ಪ್ರದರ್ಶನದಿಂದ ತವರಿನಲ್ಲಿ ಆರ್‌ಸಿಬಿ ಸೋತಿದೆ.
Advertisement
ಸೂಪರ್ ಓವರ್‌ನಲ್ಲಿ ಏನಾಯ್ತು?
ಕಿಮ್ ಗಾರ್ತ್ ಎಸೆದ ಸೂಪರ್ ಓವರ್‌ನಲ್ಲಿ ಯುಪಿ 8 ರನ್ ಗಳಿಸಿತು. ಚಿನೆಲ್ಲೆ ಹೆನ್ರಿ 4 ರನ್ ಹೊಡೆದು ಔಟಾದರು. ಸೋಫಿ ಎಕ್ಲೆಸ್ಟೋನ್ ಮತ್ತು ಹ್ಯಾರಿಸ್ ತಲಾ ಒಂದು ರನ್ ಹೊಡೆದರು. ಇತರೇ ರೂಪದಲ್ಲಿ 2 ರನ್ ಬಂದಿತ್ತು.
Advertisement
Advertisement
#UPW clinch a historic #TATAWPL game! 👏
They win the first-ever Super Over to make it 🔙 to 🔙 victories! 🥳
Scorecard ▶ https://t.co/6637diSP2I#RCBvUPW pic.twitter.com/nNqg42oQqq
— Women’s Premier League (WPL) (@wplt20) February 24, 2025
Advertisement
ಆರ್‌ಸಿಬಿ ಪರ ಬ್ಯಾಟ್ ಬೀಸಲು ಬಂದವರು ನಾಯಕಿ ಸ್ಮೃತಿ ಮತ್ತು ರಿಚಾ ಘೋಷ್. ಬೌಲಿಂಗ್ ಮಾಡಿದವರು ಸೋಫಿ ಎಕ್ಲೆಸ್ಟೋನ್. ಸೋಫಿ ಕೇವಲ 4 ರನ್ ಮಾತ್ರ ಬಿಟ್ಟು ಕೊಟ್ಟು ಪಂದ್ಯವನ್ನು ಗೆಲ್ಲಿಸಿಕೊಟ್ಟರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 6 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ನಂತರ ಬ್ಯಾಟ್ ಮಾಡಿದ ಯುಪಿ ವಾರಿರ್ಯರ್ಸ್ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೂ ಸೋಫಿ ಎಕ್ಲೆಸ್ಟೋನ್ ಕೊನೆಯಲ್ಲಿ ಸಿಕ್ಸ್, ಬೌಂಡರಿ ಸಿಡಿಸಿದ ಪರಿಣಾಮ ಪಂದ್ಯ ಟೈ ಆಗಿ ಸೂಪರ್ ಓವರ್ ಕಡೆ ತಿರುಗಿತು. ಇದನ್ನೂ ಓದಿ: ರಚಿನ್ ಶತಕ, ನ್ಯೂಜಿಲೆಂಡ್‌ಗೆ ಗೆಲುವು – ಟೂರ್ನಿಯಿಂದಲೇ ಪಾಕ್, ಬಾಂಗ್ಲಾ ಔಟ್
Did you think it was over?
Sophie Ecclestone had other ideas 🔥👏
We head to the first-ever #TATAWPL SUPER OVER! 😮
Updates ▶ https://t.co/WIQXj6JCt2#RCBvUPW | @UPWarriorz | @Sophecc19 pic.twitter.com/PDz0xqWlXx
— Women’s Premier League (WPL) (@wplt20) February 24, 2025
ಪಂದ್ಯ ಟೈ ಆಗಿದ್ದು ಹೇಗೆ?
ರೇಣುಕಾ ಸಿಂಗ್ ಎಸೆದ ಕೊನೆಯ ಓವರ್‌ನಲ್ಲಿ ಜಯಗಳಿಸಲು 18 ರನ್ ಬೇಕಿತ್ತು. ಈ ಓವರ್‌ನಲ್ಲಿ ಸೋಫಿ ಎಕ್ಲೆಸ್ಟೋನ್ 2 ಸಿಕ್ಸ್, 1 ಬೌಂಡರಿ 1 ರನ್ ತೆಗೆದರು. ಕೊನೆಯ ಎಸೆತದಲ್ಲಿ 1 ರನ್ ಬೇಕಿತ್ತು. ಸ್ಟ್ರೈಕ್‌ನಲ್ಲಿ ಕ್ರಾಂತಿ ಗೌಡ್ ಇದ್ದರು. ಬಾಲ್ ಕ್ರಾಂತಿ ಗೌಡ್ ಬ್ಯಾಟ್‌ಗೆ ತಾಗದೇ ಕೀಪರ್ ರಿಚಾ ಘೋಷ್ ಕೈ ಸೇರಿತು. ಈ ವೇಳೆ ಒಂಟಿ ರನ್ ಕದಿಯಲು ಮುಂದಾಗಿದ್ದ ಎಕ್ಲೆಸ್ಟೋನ್ ಘೋಷ್ ರನೌಟ್ ಮಾಡಿದ್ದರಿಂದ ಪಂದ್ಯ ಟೈಯಲ್ಲಿ ಕೊನೆಯಾಯಿತು. ಸೋಫಿ ಎಕ್ಲೆಸ್ಟೋನ್ 33 ರನ್(19 ಎಸೆತ, 1 ಬೌಂಡರಿ, 4 ಸಿಕ್ಸರ್) ಹೊಡೆದು ಪದ್ಯಕ್ಕೆ ರೋಚಕ ತಿರುವು ನೀಡಿದರು. ಪರ ಕಿರಣ್ ನವಗಿರೆ 24 ರನ್, ದೀಪ್ತಿ ಶರ್ನಾ 25 ರನ್, ಶ್ವೇತಾ ಶೇರಾವತ್ 31 ರನ್ ಹೊಡೆದು ಔಟಾದರು.
ಆರ್‌ಸಿಬಿಯ ನಾಯಕಿ ಸ್ಮೃತಿ ಮಂಧಾನ 6 ರನ್‌ಗಳಿಸಿ ಔಟಾದರು. ಎರಡನೇ ಕ್ರಮಾಂಕದಲ್ಲಿ ಬಂದ ಎಲ್ಲಿಸ್ ಪೆರ್ರಿ (Ellyse Perry) ಹಾಗೂ ಡ್ಯಾನಿ ವ್ಯಾಟ್ ಎರಡನೇ ವಿಕೆಟಿಗೆ 66 ಎಸೆತಗಳಲ್ಲಿ 94 ರನ್ ಜೊತೆಯಾಟವಾಡಿದರು.
4⃣ 6⃣ 4⃣
There was no stopping Perry tonight! 😎
Scorecard ▶ https://t.co/WIQXj6JCt2#TATAWPL | #RCBvUPW pic.twitter.com/3AKDIzP19w
— Women’s Premier League (WPL) (@wplt20) February 24, 2025
ಡ್ಯಾನಿ ವ್ಯಾಟ್ 57 ರನ್(41 ಎಸೆತ, 4 ಬೌಂಡರಿ, 3 ಸಿಕ್ಸ್ ) ಹೊಡೆದು ಔಟಾದರೆ ಪೆರ್ರಿ ಔಟಾಗದೇ 90 ರನ್ ( 56 ಎಸೆತ, 9 ಬೌಂಡರಿ, 3 ಸಿಕ್ಸ್) ಚಚ್ಚಿದರು.
10 ಓವರ್‌ವರೆಗೂ ಕೇವಲ 1 ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿ ನಂತರ 10 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡಿತು. ರಿಚಾ ಘೋಷ್ 6 ಎಸೆತಗಳಲ್ಲಿ 8 ರನ್, ಕನಿಕಾ ಅಹುಜಾ 3 ಎಸೆತಗಳಲ್ಲಿ 5 ರನ್, ಜಾರ್ಜಿಯಾ ವೇರ್‌ಹ್ಯಾಮ್ 5 ಎಸೆತಗಳಲ್ಲಿ 7 ರನ್ ಗಳಿಸಿ ಔಟಾದರು.