ಲಕ್ನೋ: ಉತ್ತರಪ್ರದೇಶದ ಮಥುರಾ ಜಿಲ್ಲೆಯಲ್ಲಿ ಮುಸ್ಲಿಂ ಪ್ರಾಬಲ್ಯವಿರೋ ಗ್ರಾಮವೊಂದರಲ್ಲಿ ಗೋಹತ್ಯೆ ಮಾಡಿದವರಿಗೆ 2.5 ಲಕ್ಷ ರೂ. ದಂಡ ವಿಧಿಸಲು ಇಲ್ಲಿನ ಗ್ರಮ ಪಂಚಾಯ್ತಿ ನಿರ್ಧರಿಸಿದೆ.
ಇದೇ ವಾರದ ಆರಂಭದಲ್ಲಿ ಮಾದೋರಾ ಗ್ರಾಮ ಪಂಚಾಯ್ತಿ ಸಭೆ ಸೇರಿ ಈ ತೀರ್ಮಾನ ತೆಗೆದುಕೊಂಡಿದೆ. ಸುಮಾರು 3 ಸಾವಿರ ಜನಸಂಖ್ಯೆ ಇರೋ ಈ ಗ್ರಾಮದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
Advertisement
ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಗೋಹತ್ಯೆ ವಿರದ್ಧದ ಅಭಿಯಾನವನ್ನು ಬೆಂಬಲಿಸಲು ಗ್ರಾಮದ ಮುಖ್ಯಸ್ಥರು ಸಭೆ ವೇಳೆ ಚರ್ಚಿಸಿದ್ರು. ಒಟ್ಟು 2.51 ಲಕ್ಷ ರೂ. ದಂಡದ ಹಣದಲ್ಲಿ 51 ಸಾವಿರ ರೂ. ಹಣವನ್ನು ಗೋಹತ್ಯೆ ಬಗ್ಗೆ ಮಾಹಿತಿ ನೀಡಿದವರಿಗೆ ಕೊಡಲಾಗುತ್ತದೆ ಎಂದು ಗ್ರಾಮದ ಮಾಜಿ ಅಧ್ಯಕ್ಷ ಮೊಹಮ್ಮದ್ ಗಫರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
Advertisement
ಹುಡುಗಿಯರು ಫೋನ್‍ನಲ್ಲಿ ಮಾತನಾಡಿದ್ರೂ ದಂಡ: ಗ್ರಾಮದ ಹೆಣ್ಣುಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಮೊಬೈಲ್ ಫೋನ್‍ನಲ್ಲಿ ಮಾತನಾಡಿದ್ರೆ 21 ಸಾವಿರ ರೂ. ದಂಡ ವಿಧಿಸಲು ಪಾಂಚಾಯ್ತಿ ಸದಸ್ಯರು ನಿರ್ಧರಿಸಿದ್ದಾರೆ. ಅಪರಾಧಗಳ ಸಂಖ್ಯೆ ಕಡಿಮೆ ಮಾಡುವುದು ಮತ್ತು ಹೆಣ್ಣುಮಕ್ಕಳು ಪ್ರೀತಿಸಿ ಓಡಿಹೋಗುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
Advertisement
ದಂಡವನ್ನು ಹೊರತುಪಡಿಸಿ ಶಿಕ್ಷೆಯ ಪ್ರಮಾಣವನ್ನು ಪಂಚಾಯ್ತಿಯೇ ನಿರ್ಧರಿಸಲಿದೆ.
Advertisement
ಇದನ್ನೂ ಓದಿ:ಗುಜರಾತ್‍ನಲ್ಲಿ ಇನ್ಮುಂದೆ ಗೋಹತ್ಯೆಗೆ ಜೀವಾವಧಿ ಶಿಕ್ಷೆ