ಲಕ್ನೋ: ತಂತ್ರಜ್ಞಾನ ಎಂಬುದು ಎಷ್ಟು ಅಪಾಯಕಾರಿಯೋ ಅಷ್ಟೇ ಪ್ರಯೋಜನಗಳು ಕೂಡ ಇವೆ. ಅಲೆಕ್ಸಾ (Alexa) ಎಂಬ ತಂತ್ರಜ್ಞಾನದಿಂದ ಬಾಲಕಿಯೊಬ್ಬಳು ತನ್ನ ಜೊತೆಗೆ ಒಂದು ವರ್ಷದ ಪುಟ್ಟ ಮಗುವಿನ ಪ್ರಾಣವನ್ನು ಕೂಡ ಉಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ (Uttarpradesh) ನಡೆದಿದೆ.
ಬಸ್ತಿಯ 13 ವರ್ಷದ ಬಾಲಕಿ ನಿಖಿತಾ ಮನೆಯೊಳಗೆ ತಮ್ಮ ಸೊಸೆ ವಮಿಕಾಳೊಂದಿಗೆ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ಕುಟುಂಬದ ಇತರ ಸದಸ್ಯರು ಪಕ್ಕದ ರೂಮಿನಲ್ಲಿದ್ದರು. ಇದನ್ನೂ ಓದಿ: ಚೀನಾದ ತಾಳಕ್ಕೆ ಕುಣಿಯುತ್ತಿದ್ದರೂ ಮಾನವೀಯ ನೆರವು – ಭಾರತದ ಸಹಾಯಕ್ಕೆ ಧನ್ಯವಾದ ಹೇಳಿದ ಮಾಲ್ಡೀವ್ಸ್
Advertisement
Advertisement
ನಡೆದಿದ್ದೇನು?: ಬಾಲಕಿ ನಿಖಿತಾ ತನ್ನ ಸೊಸೆ ಜೊತೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಐದರಿಂದ ಆರು ಮಂಗಗಳಿದ್ದ ಗುಂಪೊಂದು ಮನೆಗೆ ನುಗ್ಗಿ ಅಡುಗೆ ಮನೆಯಲ್ಲಿ ಅವ್ಯವಸ್ಥೆ ಸೃಷ್ಟಿಸಿವೆ. ಪಾತ್ರೆ, ಆಹಾರ ಪದಾರ್ಥಗಳನ್ನೆಲ್ಲಾ ಎಸೆದು ಚೆಲ್ಲಾಪಿಲ್ಲಿ ಮಾಡಿವೆ. ಅಲ್ಲದೇ ಮಂಗವೊಂದು ಹಲವಾರು ಬಾರಿ ನಿಖಿತಾ ಹಾಗೂ ವಮಿಕಾ ಬಳಿಗೆ ಬಂದು ಹೋಗುತ್ತಿತ್ತು. ಇದರಿಂದ ನಿಖಿತಾ ಭಯಗೊಂಡಳು.
Advertisement
Advertisement
ಮಂಗಗಳಿಂದ ಪಾರಾಗಲು ಕೊನೆಗೆ ನಿಖಿತಾ ಫ್ರಿಡ್ಜ್ ಮೇಲೆ ಇಟ್ಟಿದ್ದ ಅಲೆಕ್ಸಾದ ಮೊರೆ ಹೋಗಿದ್ದಾಳೆ. ಅದರಲ್ಲಿ ನಾಯಿ ಬೊಗಳುವ ಶಬ್ದವನ್ನು ಪ್ಲೇ ಮಾಡಿದಳು. ಈ ವೇಳೆ ಅಲೆಕ್ಸಾ ರಿಯಾಕ್ಟ್ ಮಾಡಿದೆ. ಪರಿಣಾಮ ಮಂಗಗಳು ಹೆದರಿ ಅಲ್ಲಿಂದ ಓಡಿ ಹೋದವು. ಹೀಗಾಗಿ ಇವರಿಬ್ಬರು ಮಂಗಗಳ ದಾಳಿಯಿಂದ ಗ್ರೇಟ್ ಎಸ್ಕೇಪ್ ಆದರು.
ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ ನಿಖಿತಾ ಅವರ ತಾಯಿ ಶಿಪ್ರಾ ಓಜಾ, ಮೊದಲು ತಮ್ಮ ಮಗಳ ತ್ವರಿತ ಕ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು. ಅಲೆಕ್ಸಾವು ಇಬ್ಬರ ಪ್ರಾಣವನ್ನು ಉಳಿಸಿದೆ ಎಂದು ಹೇಳಿದ್ದಾರೆ.