ಲಕ್ನೋ: ತರಕಾರಿ (Vegetables) ಖರೀದಿಸಲು ಹೊರಗೆ ಹೋಗಿದ್ದ 13 ವರ್ಷದ ಬಾಲಕಿಯನ್ನ ಕಿಡ್ನ್ಯಾಪ್ ಮಾಡಿ ವಿವಿಧ ಸ್ಥಳಗಳಿಗೆ ಕರೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿರುವುದಾಗಿ ಪೊಲೀಸರು (UP Police) ತಿಳಿಸಿದ್ದಾರೆ.
ಏನಿದು ಘಟನೆ?
ಕಳೆದ ಏಪ್ರಿಲ್ 26ರಂದು ಸಂಜೆ ಬಾಲಕಿ ತರಕಾರಿ ಖರೀದಿಸಲು ಮನೆಯಿಂದ ಹೊರಗೆ ಹೋಗಿದ್ದಳು. ಸ್ವಲ್ಪ ದೂರ ಹೋಗುತ್ತಿದ್ದಂತೆ ಅಲ್ಲೇ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ಅಡ್ರಸ್ ಕೇಳುವ ನೆಪದಲ್ಲಿ ಬಾಲಕಿಯನ್ನ ಮಾತನಾಡಿಸಿದ್ದಾನೆ. ಆಕೆ ಅಡ್ರಸ್ ಹೇಳಲು ಮುಂದಾಗುತ್ತಿದ್ದಂತೆ ಕಾರಿನಲ್ಲಿದ್ದ ವಿಷ್ಣು ಎನ್ನುವ ವ್ಯಕ್ತಿ ಆಕೆಯನ್ನ ಕಾರಿನೊಳಗೆ ಎಳೆದುಕೊಂಡು ಕಿಡ್ನ್ಯಾಪ್ (Kidnapped) ಮಾಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದ ಭಾರತ!
ಸ್ವಲ್ಪ ಮುಂದೆ ಹೋದ ನಂತ್ರ ಮೆಡಿಕಲ್ ಸ್ಟೋರ್‌ನಲ್ಲಿ ನೀರು ಮತ್ತು ಔಷಧಿಗಳನ್ನ ತೆಗೆದುಕೊಂಡಿದ್ದಾರೆ. ಬಳಿಕ ನೀರಿನಲ್ಲಿ ಪ್ರಜ್ಞೆ ತಪ್ಪುವ ಔಷಧ ಬೆರಸಿ ಬಲವಂತವಾಗಿ ಬಾಲಕಿಗೆ ಕುಡಿಸಿದ್ದಾರೆ. ಕುಡಿದ ಬಳಿಕ ಬಾಲಕಿ ಪ್ರಜ್ಞೆ ತಪ್ಪಿದ್ದಾಳೆ. ನಂತರ ಹೋಟೆಲ್‌ಗೆ ಕರೆದೊಯ್ದು ನಕಲಿ ಐಡಿ ಕೊಟ್ಟು, ಬೆರಳಚ್ಚಿನಿಂದ ಸಹಿ ಪಡೆದಿದ್ದಾರೆ. ಬಳಿಕ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ 2 ಜಲವಿದ್ಯುತ್ ಯೋಜನೆಗಳಿಗೆ ಚಾಲನೆ – ಪಾಕ್‌ಗೆ ಶಾಕ್
ಮರುದಿನ ಆರೋಪಿ ವಿಷ್ಣು ಮತ್ತು ಸಹವರ್ತಿ ನಾರಾಯಣ್ ಇಬ್ಬರೂ ಸೇರಿ ಬಾಲಕಿಯನ್ನ ದಾರಿಯಲ್ಲಿ ಬಿಟ್ಟುಬಂದಿದ್ದಾರೆ. ನಂತರ ಸಂಜಯ್ ಎಂಬಾತ ಆಕೆಯನ್ನ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಆಕೆಗೆ ಕೂಲ್‌ಡ್ರಿಂಗ್ಸ್ ಕೊಟ್ಟಿದ್ದಾನೆ, ಕುಡಿಯುತ್ತಿದ್ದಂತೆ ಆಕೆ ಪ್ರಜ್ಞೆತಪ್ಪಿದ್ದು, ಆತನೂ ಅತ್ಯಾಚಾರ ಎಸಗಿದ್ದಾನೆ. ಮರುದಿನ ಬೆಳಗ್ಗೆ ಆಕೆ ಎಚ್ಚರಗೊಂಡು ತನ್ನ ಫೋನ್ ಕೇಳಿದಾಗ ಸಿಮ್‌ಕಾರ್ಡ್ ಇಲ್ಲದೇ ಬರೀ ಫೋನ್ ಕೊಟ್ಟು ಕಳಿಸಿದ್ದಾನೆ.
ಹುಡುಗಿಯ ಪ್ರಕಾರ, ಆರೋಪಿ ವಿಷ್ಣು ತನ್ನ ಸಹಚರ ನಾರಾಯಣ್‌ಗೆ ಕರೆ ಮಾಡಿ, ಇಬ್ಬರೂ ಸೇರಿ ಹುಡುಗಿಯನ್ನು ದಾರಿಯಲ್ಲಿ ಬಿಟ್ಟು ಬಂದನು. ಸಂಜಯ್ ಎಂಬ ಮತ್ತೊಬ್ಬ ವ್ಯಕ್ತಿ ಅವಳನ್ನು ಕರೆದುಕೊಂಡು ಹೋಗಿ ತನ್ನ ಮನೆಗೆ ಕರೆದೊಯ್ದನು. ಅಲ್ಲಿಂದ ಸಂಜಯ್ ಬಾಲಕಿಯನ್ನ ತನ್ನ ಸಹೋದರನ ಮನೆಗೆ ಕರೆದೊಯ್ದು ತನ್ನ ಸಹೋದರನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. ಇದನ್ನೂ ಓದಿ: ಜಡ್ಜ್ ನಿವಾಸದಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್ – ಸಿಜೆಐ ಕೈ ಸೇರಿದ ತನಿಖಾ ವರದಿ
ಸಂತ್ರಸ್ತ ಬಾಲಕಿಯ ಪೋಷಕರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಬಾಲಕಿ ತನ್ನ ಅಜ್ಜಿಯೊಂದಿಗೆ ಹಳ್ಳಿಯಲ್ಲಿದ್ದಳು. ಏಪ್ರಿಲ್ 26ರಂದು ಕಾಣೆಯಾಗಿ ಮೇ 1ರಂದು ಪತ್ತೆಯಾಗಿದ್ದಳು. ಈ ಸಮಯದಲ್ಲಿ ಅನೇಕ ಸ್ಥಳಗಳಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿಯ ತಂದೆ ಶಿವರಾಮ್ ಸಿಂಗ್ ಹೇಳಿದ್ದಾರೆ.
ಬಾಲಕಿ ಹಾಗೂ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಓರ್ವನನ್ನ ಬಂಧಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಭಾರತ-ಪಾಕ್ ನಡುವೆ ಯುದ್ಧ ಛಾಯೆ – ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್