ಲಕ್ನೋ: ಸಮಾಜವಾದಿ ಪಕ್ಷದ (ಎಸ್‍ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಸುಳ್ಳುಗಾರರ ಪಕ್ಷ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೂ ಮುನ್ನ ಬದೌನ್‍ನಲ್ಲಿ ರ್‍ಯಾಲಿ ನಡೆಸಿ ಮಾತನಾಡಿದ ಅವರು, ಬಿಜೆಪಿಯ ಸಣ್ಣ ನಾಯಕರು ಸಣ್ಣ ಸುಳ್ಳುಗಳನ್ನು ಹೇಳುತ್ತಿದ್ದಾರೆ. ದೊಡ್ಡ ನಾಯಕರು ದೊಡ್ಡ ಸುಳ್ಳುಗಳನ್ನು ಹೇಳುತ್ತಿದ್ದಾರೆ ಮತ್ತು ಉನ್ನತ ನಾಯಕರು ದೊಡ್ಡ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಒಟ್ಟಾರೆ ಬಿಜೆಪಿ ಸುಳ್ಳುಗಾರರ ಪಕ್ಷ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಫೆಬ್ರವರಿ 10 ರಿಂದ ರಾಜ್ಯದಲ್ಲಿ ಏಳು ಹಂತದ ವಿಧಾನಸಭಾ ಚುನಾವಣೆ ಆರಂಭವಾಗಿದ್ದು, ಮೊದಲ ಹಂತದ ಮತದಾನದ ಶೇಕಡಾವಾರು ಪ್ರಮಾಣದಲ್ಲಿ ಬಿಜೆಪಿ ವಿರುದ್ಧ ಸಮಾಜವಾದಿ ಪಕ್ಷ ಅತೀ ಹೆಚ್ಚು ಮತಗಳನ್ನು ಪಡೆಯುವ ಮೂಲಕ ರಾಜಕೀಯ ದಿಕ್ಕನ್ನೇ ಬದಲಿಸಿದೆ ಎಂದಿದ್ದಾರೆ. ಇದನ್ನೂ ಓದಿ: ಇಂಟರ್ವ್ಯೂಗೆ ಬಂದಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್ – ಕಟ್ಟಡದಿಂದ ಹೊರಗೆ ಎಸೆದ ಪಾಪಿಗಳು
Advertisement
Advertisement
ಎರಡನೇ ಹಂತದ ಚುನಾವಣೆಯಲ್ಲಿ ಬಿಜೆಪಿ ನಿರ್ನಾಮವಾಗಲಿದೆ. ಬದೌನ್‍ನಲ್ಲಿ ಖಾತೆ ತೆರೆಯಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನೂ ಫೆಬ್ರವರಿ 14ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.
ಒಂಬತ್ತು ಜಿಲ್ಲೆಗಳಾದ ಸಹರಾನ್‍ಪುರ, ಬಿಜ್ನೋರ್, ಅಮ್ರೋಹಾ, ಸಂಭಾಲ್, ಮೊರಾದಾಬಾದ್, ರಾಂಪುರ, ಬರೇಲಿ, ಬದೌನ್ ಮತ್ತು ಶಹಜಹಾನ್‍ಪುರ ಸೇರಿದಂತೆ ಒಟ್ಟು 55 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ ಎಂದಿದ್ದಾರೆ. ಇದನ್ನೂ ಓದಿ: ಭವಿಷ್ಯದ ದಿನಗಳಲ್ಲಿ ವಾಹನ ಚಾಲನೆ ಮಾಡುವಾಗ ಫೋನ್‍ನಲ್ಲಿ ಮಾತಾಡಿದ್ರೆ ಅದು ಅಪರಾಧವಲ್ಲ: ನಿತಿನ್ ಗಡ್ಕರಿ