ಲಕ್ನೋ: ಎಲ್ಲರಿಗೂ ಧೈರ್ಯ ಹೇಳಬೇಕಾದ ಪೊಲೀಸ್ ಅಧಿಕಾರಿಯೊಬ್ಬರು ಮಕ್ಕಳ ರೀತಿ ಅಳುತ್ತ, ಕಿರುಚುತ್ತ ರಕ್ತಪರೀಕ್ಷೆ ಮಾಡಿಸಿಕೊಳ್ಳುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಯುಪಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ರಕ್ತಪರೀಕ್ಷೆ ಮಾಡಿಸಿಕೊಳ್ಳಲು ಇಷ್ಟವಿಲ್ಲದೇ ಮಗುವಿನಂತೆ ಕಿರುಚುತ್ತ ಇರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದು. ಈ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ಪೊಲೀಸ್ ತರಬೇತಿ ಶಿಬಿರದಲ್ಲಿ ನಡೆದಿದೆ. ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸರು ರಕ್ತದ ಮಾದರಿಯನ್ನು ನೀಡಬೇಕಾಗಿತ್ತು. ಈ ವೇಳೆ ಪೊಲೀಸ್ ಅಧಿಕಾರಿ ಅಳುತ್ತಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಾರಕಾಸ್ತ್ರದಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಹತ್ಯೆ
View this post on Instagram
ವೀಡಿಯೋದಲ್ಲಿ ಏನಿದೆ?
ಕುರ್ಚಿಯಲ್ಲಿ ಕುಳಿತಿದ್ದ ಪೊಲೀಸ್ ಬಳಿ ವೈದ್ಯಕೀಯ ಸಹಾಯಕರೊಬ್ಬರು ಸಿರಿಂಜ್ ತೆಗೆದುಕೊಂಡು ಹತ್ತಿರ ಹೋದ ತಕ್ಷಣ, ಅವರು ಎರಡು ಕೈ ಜೋಡಿಸಿ ಅಳಲು ಪ್ರಾರಂಭಿಸಿದರು. ಇನ್ನೊಬ್ಬ ಪೊಲೀಸ್ ಅವರ ಕೈಯನ್ನು ಹಿಡಿದುಕೊಂಡು ಟೆಸ್ಟ್ ಮಾಡಿಸಿಕೊಳ್ಳಲು ಸೂಚಿಸುತ್ತಾರೆ. ಈ ವೇಳೆ ಅವರು ಪರೀಕ್ಷೆಯನ್ನು ಬೇಡ ಎಂದು ಹೇಳಲು ಪ್ರಾರಂಭಿಸಿದಾಗ, ಇಬ್ಬರು ಪುರುಷರು ಅವರ ಎರಡೂ ಕೈ ಹಿಡಿದುಕೊಂಡು ಟೆಸ್ಟ್ ಮಾಡಿಸಲು ಸಿದ್ಧರಾಗುತ್ತಾರೆ.
ವೈದ್ಯರು ಸೂಜಿಯನ್ನು ಹಾಕಿದ ತಕ್ಷಣ ಪೊಲೀಸ್ ಅಳಲು ಪ್ರಾರಂಭ ಮಾಡುತ್ತಾರೆ. ಇದನ್ನು ನೋಡಿದ ಅವರ ಸಹೋದ್ಯೋಗಿಗಳು ನಗುತ್ತಿರುವುದನ್ನು ವೀಡಿಯೋದಲ್ಲಿದೆ. ವೈದ್ಯರು ಪೊಲೀಸ್ ರಕ್ತದ ಸ್ಯಾಂಪಲ್ ತೆಗೆದುಕೊಂಡ ನಂತರ ಅವರ ಮೊಣಕೈ ಮಡಚಿ, ಬೆನ್ನನ್ನು ತಟ್ಟಿ ಸಮಾಧಾನಪಡಿಸಿದರು. ಕೊನೆಯಲ್ಲಿ, ಅವರ ಹಿಂದೆ ಇನ್ನೊಬ್ಬ ಪೊಲೀಸ್ ನಗುತ್ತ ಕಣ್ಣೀರನ್ನು ಒರೆಸುವುದನ್ನು ನೋಡಬಹುದು. ಇದನ್ನೂ ಓದಿ: ಡ್ರೋನ್‌ಗೆ ಗುಂಡು -ಸೇನೆಯ ದಾಳಿಗೆ ಮರಳಿ ಪಾಕಿಗೆ ಓಡಿ ಹೋಯ್ತು
ವೀಡಿಯೋ ವೀಕ್ಷಿಸಿದ ನಂತರ ನೆಟ್ಟಿಗರು ನಗುವಿನ ಎಮೋಜಿಗಳೊಂದಿಗೆ ಕಾಮೆಂಟ್‍ಗಳನ್ನು ಮಾಡುತ್ತಿದ್ದಾರೆ.