ಲಕ್ನೋ: ಸಾರ್ವಜನಿಕ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಮಹಿಳಾ ಡ್ಯಾನ್ಸರ್ ಮೇಲೆ ಪೊಲೀಸ್ ಪೇದೆಯೊಬ್ಬ ಹಣ ತೂರಿರುವ ಘಟನೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿದೆ.
ನವೆಂಬರ್ 13 ರಂದು ಈ ಘಟನೆ ನಡೆದಿದ್ದು, ಬುಧವಾರ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಲಾಗಿತ್ತು. ಇದೀಗ ಈ ವಿಡಿಯೋ ಹೆಚ್ಚು ವೈರಲ್ ಆಗಿದೆ.
Advertisement
ವಿಡಿಯೋದಲ್ಲಿ ಇರುವ ಪೊಲೀಸ್ ಪೇದೆ ಉತ್ತರ ಪ್ರದೇಶದ ಧನೇಪೂರ್ ಪ್ರದೇಶದಲ್ಲಿ ಸೇವೆಗೆ ನಿಯೋಜನೆ ಗೊಂಡಿರುವ ಚಂದ್ರಶೇಖರ್ ಬಾಸ್ಕರ್ ಎಂದು ತಿಳಿದು ಬಂದಿದೆ.
Advertisement
ಮಹಿಳಾ ಡ್ಯಾನ್ಸರ್ ಮೇಲೆ ಹಣ ತೂರಿದ ಪೊಲೀಸ್ ಪೇದೆ ಚಂದ್ರಶೇಖರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಗೊಂಡಾ ಎಸ್ಪಿ ಉಮೇಶ್ ಕುಮಾರ್ ಪೇದೆಯನ್ನು ಅಮಾನತುಗೊಳಿಸಿರುವುದಾಗಿ ತಿಳಿಸಿದ್ದಾರೆ.
Advertisement
ವಿಡಿಯೋದಲ್ಲೇನಿದೆ: ಪೊಲೀಸ್ ಪೇದೆ ಚಂದ್ರಶೇಖರ್ ಸಮವಸ್ತ್ರ ಧರಿಸಿ ಮಹಿಳಾ ಡ್ಯಾನ್ಸರ್ ಮೇಲೆ ನೋಟಿನ ಸುರಿಮಳೆ ಮಾಡಿದ್ದಾರೆ. ಪೇದೆ ಸುರಿದ ನೋಟುಗಳನ್ನು ಪಕ್ಕದಲ್ಲೇ ವ್ಯಕ್ತಿಯೊಬ್ಬರು ತೆಗೆದುಕೊಳ್ಳುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.
Advertisement
#WATCH: Policeman seen showering money on a dancer at an event in Gonda, #UttarPradesh (13.11.2017) pic.twitter.com/1dXsP8m0t8
— ANI UP/Uttarakhand (@ANINewsUP) November 15, 2017
Police Constable Chandrakesh Bhaskar, posted in Dhaneypur, suspended after he was seen showering money on a dancer in an event in Gonda: Umesh Kumar Singh, SP Gonda #UttarPradesh
— ANI UP/Uttarakhand (@ANINewsUP) November 15, 2017