ಲಕ್ನೋ: ಪ್ರಕರಣದ ಆರೋಪಿಗಳ (Accused) ಪಟ್ಟಿಯಿಂದ ತನ್ನ ಹೆಸರನ್ನು ತೆಗೆದು ಹಾಕಿದ್ದಕ್ಕಾಗಿ ಉತ್ತರ ಪ್ರದೇಶದ ಪೊಲೀಸರು (UP Police) ವ್ಯಾಪಾರಿಯೊಬ್ಬರಿಂದ ನಗದಿನ ಬದಲಾಗಿ 4 ಜೊತೆ ಶೂಗಳನ್ನ ಲಂಚವಾಗಿ ಪಡೆದಿದ್ದಾರೆ.
ರಾಜ್ಯದ ಆಗ್ರಾ ನಗರದಲ್ಲಿ (Agra City) ಪೊಲೀಸರು ವ್ಯಾಪಾರಿಯೊಬ್ಬರ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿದ್ದರು. ಅದರ ಭಾಗವಾಗಿ ವ್ಯಾಪಾರಿಯ ಹೇಳಿಕೆಯನ್ನ ದಾಖಲಿಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕಿತ್ತು. ಆದ್ರೆ, ಪೊಲೀಸರು ವ್ಯಾಪಾರಿಯನ್ನ ಸಂಪರ್ಕಿಸಿ, ಅವರ ಪರವಾಗಿ ವರದಿ ಬರೆಯಲು ಲಂಚವಾಗಿ ಹಣ ಕೇಳಿದ್ದರು. ಇದನ್ನೂ ಓದಿ: ಮರ್ಮಾಂಗಕ್ಕೆ ಒದ್ದು ಹಲ್ಲೆ, ಬಾಲಕನ ವೃಷಣಕ್ಕೆ ಗಂಭೀರ ಗಾಯ – ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ರ‍್ಯಾಗಿಂಗ್
ವ್ಯಾಪಾರಿಯು, ಹಣ ನೀಡಲು ಸಾಧ್ಯವಿಲ್ಲ ಎಂದಾಗ, 4 ಜೊತೆ ಶೂಗಳನ್ನ ನೀಡುವಂತೆ ಪೊಲೀಸರು ಒತ್ತಾಯಿಸಿದ್ರು. ಹಾಗಾಗಿ ವ್ಯಾಪಾರಿಯು ಅವರಿಗೆ ಶೂಗಳನ್ನ ನೀಡಿದ್ದರು ಎನ್ನಲಾಗಿದೆ. ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಸಂಖ್ಯೆಗೆ ದೂರು ಸಲ್ಲಿಸಿದ ನಂತರ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ದರ್ಶನ್ ಹಾಸಿಗೆ, ದಿಂಬಿಗಾಗಿ ಕೋರ್ಟ್‌ಹೋಗ್ತಾರೆ, ಆದರೆ ಈ ಕೈದಿಗಳಿಗೆ ಎಲ್ಲವೂ ಸಿಗುತ್ತೆ: ಪರಂ ಸಿಟ್ಟು

