ಲಕ್ನೋ: ಮಹಿಳೆಯೊಬ್ಬಳ ಜುಟ್ಟು ಹಿಡಿದು ನರ್ಸ್ ಆಕೆಯನ್ನು ಹಾಸಿಗೆ ಮೇಲೆ ಎಳೆದುಕೊಂಡು ಹೋಗಿ ಕೂರಿಸಿರುವ ಹಿಂಸಾತ್ಮಕ ಘಟನೆ ಉತ್ತರ ಪ್ರದೇಶದ (Uttar Pradesh) ಜಿಲ್ಲಾ ಆಸ್ಪತ್ರೆಯೊಂದರಲ್ಲಿ ನಡೆದಿದೆ.
Advertisement
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆಯ ಅಧಿಕಾರಿಗಳು ನರ್ಸ್ ತೆಗೆದುಕೊಂಡ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ರೋಗಿಗೆ ಯಾವುದೇ ರೀತಿಯ ಕೆಟ್ಟ ಚಿಕಿತ್ಸೆಯನ್ನು ನೀಡಲಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತೀಯ ರೂಪಾಯಿ, ಏಮ್ಸ್ ಯೋಜನೆ ಬಗ್ಗೆ ಟೀಕೆ – ಬಿಜೆಪಿ ವಿರುದ್ಧ ಉದಯನಿಧಿ ಸ್ಟಾಲಿನ್ ವಾಗ್ದಾಳಿ
Advertisement
Advertisement
ಸೀತಾಪುರ ಜಿಲ್ಲಾ ಆಸ್ಪತ್ರೆಯ ಮಹಿಳಾ ವಾರ್ಡ್‍ನಲ್ಲಿ ನಡೆದ ಗಲಾಟೆಯ ವೀಡಿಯೋದಲ್ಲಿ, ನರ್ಸ್ ಒಬ್ಬರು ಮಹಿಳೆಯ ಕೂದಲನ್ನು ಹಿಡಿದುಕೊಂಡು ಖಾಲಿ ಹಾಸಿಗೆ ಮೇಲೆ ತಳ್ಳಿರುವುದನ್ನು ಕಾಣಬಹುದಾಗಿದೆ. ಇದೇ ವೇಳೆ ಹಾಸಿಗೆಯ ಇನ್ನೊಂದು ಬದಿಯಲ್ಲಿ ನಿಂತಿದ್ದ ವ್ಯಕ್ತಿ ಆಕೆಯನ್ನು ಬೆಡ್ ಮೇಲೆ ಸರಿಯಾಗಿ ಮಲಗಿಸುತ್ತಾನೆ. ಇದನ್ನೂ ಓದಿ: ಬೈಕ್ ಸವಾರನೊಂದಿಗೆ ಜಗಳ – ಸಿಟ್ಟಿನಿಂದ ಜನರ ಮೇಲೆ ಕಾರು ಹರಿಸಿದ
Advertisement
ಈ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಸೀತಾಪುರದ ಮುಖ್ಯ ವೈದ್ಯಾಧಿಕಾರಿ ಡಾ ಆರ್‌ಕೆ ಸಿಂಗ್, ಮಹಿಳೆಯನ್ನು ಅಕ್ಟೋಬರ್ 18 ರಂದು ದಾಖಲಿಸಲಾಯಿತು. ಮರುದಿನ ರಾತ್ರಿ ಆಕೆಯ ಕುಟುಂಬಸ್ಥರು ಹೊರ ಹೋದ ಬಳಿಕ, 12 ಅಥವಾ 1 ಗಂಟೆ ಸುಮಾರಿಗೆ ವಾಶ್ ರೂಮ್‍ಗೆ ಹೋಗಬೇಕೆಂದು ಹೋದಳು. ಈ ವೇಳೆ ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸಲು ಆರಂಭಿಸಿದಳು. ಕೈಯಲ್ಲಿ ಬಳೆಗಳನ್ನು ಒಡೆದು, ಬಟ್ಟೆಯನ್ನು ಹರಿದುಕೊಳ್ಳಲು ಆರಂಭಿಸಿದಳು. ಇದರಿಂದ ವಾರ್ಡ್‍ನಲ್ಲಿದ್ದ ಇತರ ಮಹಿಳೆಯರಲ್ಲಿ ಗಾಬರಿಯುಂಟಾಯಿತು. ಈ ನಡುವೆ ಮಹಿಳೆಯನ್ನು ನಿಯಂತ್ರಣಕ್ಕೆ ತರಲು ಆಸ್ಪತ್ರೆಯ ಸಿಬ್ಬಂದಿ ಮಧ್ಯ ಪ್ರವೇಶಿಸಬೇಕಾಯಿತು.
ಬಳಿಕ ಈ ಬಗ್ಗೆ ನರ್ಸ್ ಪೊಲೀಸರಿಗೆ ಮಾಹಿತಿ ನೀಡಿದರು ಮತ್ತು ಇದೇ ವೇಳೆ ಇತರ ನರ್ಸ್‍ಗಳು ಸಹಾಯಕ್ಕೆ ಧಾವಿಸಿದರು. ನಂತರ ನರ್ಸ್ ಚುಚ್ಚುಮದ್ದು ನೀಡಿದ್ದರಿಂದ ಮಹಿಳೆ ಶಾಂತಳಾದಳು ಮತ್ತು ಆಕೆಯ ಕುಟುಂಬಸ್ಥರು ಬಂದ ಬಳಿಕ ಡಿಸ್ಚಾರ್ಜ್ ಮಾಡಲಾಯಿತು ಎಂದು ಹೇಳಿದ್ದಾರೆ.