ಲಕ್ನೋ: ನೋ ಜಾಬ್ ಎಂದು ಮೋದಿ ಸರ್ಕಾರವನ್ನು ಟೀಕಿಸುತ್ತಿದ್ದ ಪ್ರತಿಪಕ್ಷಗಳಿಗೆ ಉತ್ತರ ಪ್ರದೇಶದ ಮಂತ್ರಿಗಳು ಪಕೋಡ ಮತ್ತು ಜಿಲೇಬಿ ಮಾಡುವ ಮೂಲಕ ಉತ್ತರ ಕೊಟ್ಟಿದ್ದಾರೆ.
ಈ ಹಿಂದೆ ಅಲಹಾಬಾದ್ ಎಂದು ಕರೆಯಲ್ಪಡುತ್ತಿದ್ದ ಪ್ರಯಾಗ್‍ರಾಜ್‍ನ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿನ ಸಚಿವರು, ಬೆಂಬಲಿಗರು ಪ್ರಚಾರಕ್ಕಾಗಿ ಅಲ್ಲಿನ ಮಾರುಕಟ್ಟೆಗೆ ಹೋಗಿದ್ದಾರೆ. ಅಲ್ಲಿ ಪೂರಿ, ಚಹಾ ಮತ್ತು ಪಕೋಡ ಮಾಡುವ ಮೂಲಕ ನಿರುದ್ಯೋಗ ಸಮಸ್ಯೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದವರಿಗೆ ಉತ್ತರ ಕೊಟ್ಟಿದ್ದಾರೆ. ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಸಾಮಾನ್ಯ ಜನರಿಗೆ ಅವರು ಮಾಡಿದ ಪಕೋಡಾ ಮತ್ತು ಜಿಲೇಬಿಯನ್ನು ಕೊಟ್ಟಿ ಸಂಭ್ರಮಿಸಿರುವುದು ಫೋಟೋದಲ್ಲಿ ಕಾಣಬಹುದು. ಇದನ್ನೂ ಓದಿ: ರಷ್ಯಾ ಭಾಷೆ ಮಾತಾಡುವ ರಾಯಭಾರಿಗಳನ್ನು ಉಕ್ರೇನ್‍ಗೆ ಕಳುಹಿಸಲಾಗುತ್ತಿದೆ: ಸಿಎಂ
Advertisement
Advertisement
ಬಿಜೆಪಿ ಎಂಎಲ್‍ಎಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಪೂರಿ, ಚಹಾ ಮತ್ತು ಪಕೋಡ ಮಾಡಿದ ವೀಡಿಯೋ ನೋಡಿದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದಾರೆ. ಈ ವೇಳೆ ಶ್ರೀ ಗುಪ್ತ ಅವರು, ಬಿಜೆಪಿ ಸರ್ಕಾರವು ಜನರಿಗೆ ಸಾವಿರಾರು ಕೆಲಸಗಳನ್ನು ಕೊಟ್ಟಿದೆ. ಅದನ್ನು ಜನರು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು. ಈ ಕೆಲಸಗಳಿಗೆ ಯಾರು ದುಡ್ಡು ಕೊಡಬೇಕು ಎಂಬುದಿಲ್ಲ. ಜನರು ಸ್ನ್ಯಾಕ್ಸ್ ಮಾರಾಟ ಮಾಡಿದರೂ ಅದು ಸಹ ಉದ್ಯೋಗವೇ ಎಂದು ಹೇಳಿದ್ದಾರೆ.
Advertisement
ಇಲ್ಲಿನ ಜನರು ನನ್ನನ್ನು ಪ್ರೀತಿಯಿಂದ ನಮ್ಮ ಅಂಗಡಿಗೂ ಬಂದು ಏನಾದರೂ ಮಾಡಿಕೊಡಿ ಎನ್ನುತ್ತಾರೆ. ಅದೇ ಸಂತೋಷದ ವಿಷಯ ಎಂದು ತಿಳಿಸಿದ್ದಾರೆ.
Advertisement
ಸಮಾಜವಾದಿ ಪಕ್ಷದ ಜನರು ನಿರುದ್ಯೋಗಿಗಳು. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಕಾಲದಲ್ಲಿ ಪೂರ್ವಾಂಚಲ್ ಎಕ್ಸ್‍ಪ್ರೆಸ್‍ವೇ ನಿರ್ಮಿಸುವಾಗ 15,000 ಕೋಟಿ ವೆಚ್ಚವಾಯಿತು. ಆದರೆ ನಾವು 4,500 ಕೋಟಿ ರೂ. ಕಡಿಮೆ ಬಜೆಟ್‍ನಲ್ಲಿ ವಿಶಾಲವಾದ, ಉತ್ತಮವಾದ, ಉದ್ದವಾದ ಎಕ್ಸ್‍ಪ್ರೆಸ್‍ವೇ ಮಾಡಿದ್ದೇವೆ. ಈ ಕುರಿತು ನೀವು ಸರಿಯಾಗಿ ಯೋಚಿಸಬೇಕು ಎಂದು ಜನರಿಗೆ ಹೇಳಿದರು. ಇದನ್ನೂ ಓದಿ: ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?
ಈ ಮಧ್ಯೆ ಮತ್ತೊಬ್ಬ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರು ಪ್ರಯಾಗ್‍ರಾಜ್‍ನಲ್ಲಿ ಪಕೋಡಗಳನ್ನು ಮಾಡಿರುವುದು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.