ವಿಜಯಪುರ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿಯತ್ತಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಗಂಭೀರ ಆರೋಪ ಮಾಡಿದರು.
ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದ ಅಭ್ಯರ್ಥಿ ದಯಾಸಾಗರ ಪಾಟೀಲ ಪರವಾಗಿ ಮತಯಾಚನೆ ನಡೆಸಿ ಮಾತನಾಡಿದ ಅವರು, ಬಿಜೆಪಿ ನಿಯತ್ತಿನಲ್ಲಿ ಸಮಾಜವನ್ನು ಜೋಡಿಸುವುದು ಹಾಗೂ ಸಮಾಜ ವಿಕಾಸ ಮಾಡುವುದು ಆಗಿದೆ. ಅಲ್ಲದೇ, ಕೇಂದ್ರ ಸರ್ಕಾರ ಸಮಾಜಕ್ಕಾಗಿ ಒಳ್ಳೆಯ ಕೆಲಸ ಮಾಡುತ್ತಿದೆ ಎಂದರು. ಇದನ್ನೂ ಓದಿ: Steel ಬ್ರಿಡ್ಜ್ ಅಲ್ಲ, ಅದು Steal ಬ್ರಿಡ್ಜ್- ಕೈ ಸರ್ಕಾರದಿಂದ ಬೆಂಗ್ಳೂರಿಗೆ 5 ಕೊಡುಗೆ: ಮೋದಿ
ಆರ್‍ಎಸ್‍ಎಸ್ ಹಾಗೂ ಬಿಜೆಪಿ ದಲಿತರ ಮೀಸಲಾತಿ ಮುಗಿಸಲು ನಿಂತಿದೆ ಅಂತಾ ರಾಗಾ ಹೇಳತ್ತಿದ್ದಾರೆ. ಆದ್ರೆ, ರಾಗಾ ದಲಿತರ ಹೆಸರಿನಲ್ಲಿ ರಾಜನೀತಿ ಮಾಡುತ್ತಿದ್ದಾರೆ. ರಾಗಾ ಸಮಾಜ ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಸಮಾಜ ವಿಕಾಸಕ್ಕಾಗಿ ಕೆಲಸ ಮಾಡುತ್ತಿದೆ. ಸೀದಾ ರೂಪಾಯಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಲೂಟಿ ಮಾಡ್ತಾ ಇದೆ ಎಂದು ಹರಿಹಾಯ್ದರು.
ಈ ಸೀದಾ ರೂಪಾಯಿಯಲ್ಲಿ ಕರ್ನಾಟಕ ಜನರು ಸಾಲಗಾರರು ಆಗಿದ್ದಾರೆ. ಆದ್ರೆ, ಸಚಿವರು ಮಾತ್ರ ಶ್ರೀಮಂತರಾಗಿದ್ದಾರೆ. ಅದಕ್ಕಾಗಿ ಇಂಥ ಸಚಿವರನ್ನು ಬರುವ ಚುನಾವಣೆಯಲ್ಲಿ ಆಯ್ಕೆ ಮಾಡಬಾರದು ಎಂದು ಮನವಿ ಮಾಡಿದರು.
ಸಮಾಜವನ್ನು ಒಡೆದು ರಾಜನೀತಿ ಮಾಡುವ ಕಾಂಗ್ರೆಸ್ ಸರ್ಕಾರ ತೆಗೆದು ಒಗೆಯಬೇಕು. ಅಲ್ಲದೇ, ಕಾಂಗ್ರೆಸ್ ಎನ್ನುವ ಭೂತವನ್ನು ತೆಗೆದು ಹಾಕಬೇಕು. ಆ ಘಳಿಗೆ ಮೇ 12ರಂದು ಕಾಂಗ್ರೆಸ್ ಭೂತ ಬರದಂತೆ ಮಾಡಬೇಕು ಎಂದರು.