ಲಕ್ನೋ: ಪತ್ನಿ ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದಳು ಅಂತಾ ಪತಿಯೊಬ್ಬ ತನ್ನ 18 ತಿಂಗಳ ಮಗಳನ್ನು ಮನೆಯ ಮಹಡಿಯಿಂದ ಎಸೆದ ಅಮಾನವೀಯ ಘಟನೆ ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.
ಗುರುವಾರ ಸಿಬಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಧುಲಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಅರವಿಂದ್ ಗಂಗ್ವಾರ್ ಮಗುವನ್ನು ಎಸೆದ ಆರೋಪಿ. ಅರವಿಂದ್ ಪುತ್ರಿಯ ಸ್ಥಿತಿ ಗಂಭೀರವಾಗಿದ್ದು, ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಡೆದದ್ದು ಏನು?
ಅರವಿಂದ್ ದಂಪತಿಗೆ ಈ ಮೊದಲು ಹೆಣ್ಣು ಮಗು ಜನಿಸಿತ್ತು. ಎರಡನೇ ಹೆರಿಗೆಯಲ್ಲಿ ಪತ್ನಿ ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಗಂಡು ಮಗುವಿನ ಆಕಾಂಕ್ಷಿ ಆಗಿದ್ದ ಅರವಿಂದ್ ಪತ್ನಿಯ ಹೆರಿಗೆಯಾದ ಮೇಲೆ ನಿತ್ಯವೂ ಮನೆಯಲ್ಲಿ ಜಗಳವಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗುರುವಾರ ಮದ್ಯ ಸೇವಿಸಿ ಮನೆಗೆ ಬಂದಿದ್ದ ಅರವಿಂದ್, ತನ್ನ 18 ತಿಂಗಳ ಮಗಳನ್ನು ಮನೆಯ ಮಹಡಿಯ ಮೇಲೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಅಲ್ಲಿ ಎಸದ ಪರಿಣಾಮ, ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಅರವಿಂದ್ ಮೇಲೆ ಕೊಲೆಗೆ ಯತ್ನ ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಎಸ್‍ಪಿ ಅಭಿಮನ್ಯು ಸಿಂಗ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv