ಲಕ್ನೋ: ತಾನು ಪ್ರೀತಿಸುತ್ತಿರುವ ಹುಡುಗಿ ಬೇರೊಬ್ಬನ ಜೊತೆ ಮೊಬೈಲ್ (Mobile) ನಲ್ಲಿ ಮಾತನಾಡಿದ್ದಾಳೆಂದು ಸಿಟ್ಟಿಗೆದ್ದು ಹುಡುಗನೊಬ್ಬ ಆಕೆಗೆ ಶೂಟೌಟ್ (Shootout) ಮಾಡಿ ನಂತರ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರಪ್ರದೇಶ (Uttarpradesh) ದಲ್ಲಿ ನಡೆದಿದೆ.
Advertisement
ಈ ಘಟನೆ ಉತ್ತರಪ್ರದೇಶದಲ್ಲಿ ಮಾನ್ವಿ ಭಾನ್ಪುರ್ ಪ್ರದೇಶದಲ್ಲಿ ನಡೆದಿದೆ. ಸದ್ಯ ಘಟನೆಯಿಂದ ಹುಡುಗಿಯ ಸ್ಥಿತಿ ಚಿಂತಾಜನಕವಾಗಿದ್ದು, ಮೀರತ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದನ್ನೂ ಓದಿ: ಕಾರು ಡಿಕ್ಕಿಯಾಗಿ 30 ಕುರಿಗಳು ಸಾವು- ಮೂವರಿಗೆ ಗಾಯ
Advertisement
Advertisement
ಆರೋಪಿಯನ್ನು ಪವನ್ ಕುಮಾರ್ (18) ಎಂದು ಗುರುತಿಸಲಾಗಿದೆ. ಈತ ತಾನು ಪ್ರೀತಿಸಿದ ಹುಡುಗಿ ಬೇರೊಬ್ಬನ ಜೊತೆ ಮೊಬೈಲ್ (Mobile) ನಲ್ಲಿ ಮಾತನಾಡಿದ್ದಾಳೆ ಎಂದು ರೊಚಿಗೆದ್ದು, ಆಕೆ ಶಾಲೆ ಮುಗಿಸಿ ಆಟೋದಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಈ ಕೃತ್ಯ ಎಸಗಿದ್ದಾನೆ. ನಂತರ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಹುಡುಗಿಯ ಮುಖಕ್ಕೆ ಯುವಕ ಪವನ್ ಶೂಟೌಟ್ ಮಾಡಿದ್ದಾನೆ. ಘಟನೆ ನಡೆದ ಕೂಡಲೇ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೀರತ್ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಎಸ್ಪಿ ಆದಿತ್ಯ ಲಂಘೇ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k