ಲಕ್ನೋ: ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಪಿಹೆಚ್‌ಡಿ ಸಂಶೋಧಕನನ್ನ (PHD Scholar) ಕೊಂದು ರಾಜ್ಯದ ವಿವಿಧ ಕಾಲುವೆಗಳಲ್ಲಿ ಬಿಸಾಡಿದ್ದ ಘಟನೆ ಉತ್ತರ ಪ್ರದೇಶದಲ್ಲಿ (UttarPradesh) ನಡೆದಿದ್ದು, 2 ತಿಂಗಳ ನಂತರ ಕೇಸ್ (FIR) ಪತ್ತೆಯಾಗಿದೆ.
ಬಾಡಿಗೆದಾರ ಅಂಕಿತ್ ಖೋಕರ್ ಕೊಲೆಯಾದ ವ್ಯಕ್ತಿಯಾಗಿದ್ದು, ಮೋದಿನಗರದ ಕೊಲೆ ಆರೋಪಿ ಉಮೇಶ್ ಶರ್ಮಾ ಹಾಗೂ ಹಂತಕನ ಸ್ನೇಹಿತ ಪರ್ವೇಶ್‌ನನ್ನೂ ಪೊಲೀಸರು ಬಂಧಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಅಂಕಿತ್ ಖೋಕರ್ ತಮ್ಮ ಪೋಷಕರನ್ನು ಕಳೆದುಕೊಂಡಿದ್ದರು. ನಂತರ ಒಬ್ಬಂಟಿಯಾಗಿ ವಾಸಿಸುತ್ತಿದ್ದರು, ಲಕ್ನೋ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಸಂಶೋಧಕನಾಗಿದ್ದರು. ಬಾಡಿಗೆ ಮನೆಯಲ್ಲಿದ್ದ ಅಂಕಿತ್ ಖೋಕರ್ ಬಾಗ್‌ಪತ್‌ನಲ್ಲಿರುವ ತನ್ನ ಪೂರ್ವಜರ ಜಮೀನನ್ನು ಮಾರಾಟ ಮಾಡಿದ್ದ. ಇದರಿಂದ ಆತನಿಗೆ 1 ಕೋಟಿ ರೂ. ಬಂದಿತ್ತು. ಆ ಹಣದ ಮೇಲೆ ಕೊಲೆ ಆರೋಪಿ ಕಣ್ಣಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಕೇಂದ್ರ ಸಚಿವ ಕ್ರಿಶನ್ ಪಾಲ್ ಗುರ್ಜರ್
ಆತ ವಾರಗಟ್ಟಲೆ ಸ್ನೇಹಿತರ ಕರೆಗಳಿಗೆ ಉತ್ತರಿಸದೇ ಇದ್ದಾಗ, ಅನುಮಾನಗೊಂಡು ಪೊಲೀಸರಿಗೆ (Ghaziabad Police) ತಿಳಿಸಿ ಹುಡುಕಾಟ ನಡೆಸಿದ್ದಾರೆ. ನಂತರ ಅಂಕಿತ್ ಮೊಬೈಲ್ ಸಂಖ್ಯೆಯಿಂದ ಕೆಲವು ಮೆಸೇಜ್‌ಗಳು ಬಂದಿವೆ. ಇದರಿಂದ ಸಂಭಾಷಣೆಯ ಶೈಲಿ ಅವನದ್ದಲ್ಲ ಅನ್ನೋದು ಗೊತ್ತಾಗಿದೆ. ಬಳಿಕೆ ಕರೆ ಮಾಡಿದರೂ ಉತ್ತರಿಸಲಿಲ್ಲ. ನಂತರ ತನಿಖೆ (Investigation) ಕೈಗೊಂಡಿದ್ದ ಪೊಲೀಸರು ಕಳೆದ ಅಕ್ಟೋಬರ್ 6 ರಂದು ಅಂಕಿತ್ ಖೋಕರ್ ಅವರನ್ನು ಕತ್ತು ಹಿಸುಕಿ ಕೊಂದಿದ್ದಾರೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಚೀನಾ ವಿರುದ್ಧ ಮಾತನಾಡಲು ಅವಕಾಶವೇ ಇಲ್ಲ – ಖರ್ಗೆ ಕಿಡಿ
ಆರೋಪಿ ಕತ್ತು ಹಿಸುಕಿ ಕೊಂದ ನಂತರ ಗರಗಸ ಬಳಸಿ, ದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿದ್ದಾನೆ. ಅವುಗಳನ್ನು ಅಲ್ಯೂಮಿನಿಯಂ ಫಾಯಿಲ್ ನಲ್ಲಿ (ಪಾರ್ಸೆಲ್ ಕವರ್) ಪ್ಯಾಕ್ ಮಾಡಿ, ಒಂದು ಭಾಗವನ್ನು ಮುಜಾಫರ್‌ನಗರದ ಖತೌಲಿಯಲ್ಲಿ ಕಾಲುವೆಯಲ್ಲಿ, ಇನ್ನೊಂದು ಭಾಗವನ್ನು ಮಸ್ಸೂರಿ ಕಾಲುವೆಯಲ್ಲಿ ಮತ್ತೊಂದು ಭಾಗವನ್ನು ಹೆದ್ದಾರಿಯಲ್ಲಿ ಬಿಸಾಕಿ ಬಂದಿದ್ದಾನೆ.
ನಂತರ ಕೊಲೆಯಾದ ಅಂಕಿತ್ ಎಟಿಎಂ ಕಾರ್ಡ್ ಬಳಸಿ ಹಂತ-ಹಂತವಾಗಿ 20 ಲಕ್ಷ ರೂಪಾಯಿ ಡ್ರಾ ಮಾಡಿದ್ದಾನೆ. ನಂತರ ತನ್ನ ಸ್ನೇಹಿತ ಪರ್ವೇಶ್‌ಗೆ ನೀಡಿ ಉತ್ತರಾಖಂಡ್‌ನಲ್ಲಿ ಉಳಿದ ಹಣ ಡ್ರಾ ಮಾಡಿಕೊಳ್ಳುವಂತೆ, ಸಂತ್ರನ ಮೊಬೈಲ್ ಅನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುವಂತೆ ಹೇಳಿದ್ದಾನೆ. ಜೊತೆಗೆ ಅಂಕಿತ್ ನಾಪತ್ತೆ ಎಂದು ವರದಿಯಾದರೆ ತನಿಖೆಯನ್ನು ತಪ್ಪುದಾರಿಗೆ ಎಳೆಯುವಂತೆ ಸಲಹೆ ನೀಡಿದ್ದಾನೆ ಎಂದು ಗಾಜಿಯಾಬಾದ್ ಗ್ರಾಮಾಂತರದ ಉಪ ಪೊಲೀಸ್ ಆಯುಕ್ತ ಇರಾಜ್ ರಾಜಾ ಮಾಹಿತಿ ನೀಡಿದ್ದಾರೆ.