ಲಕ್ನೋ: ವಿವಾಹೇತರ ಪುರುಷನೊಂದಿಗೆ ಸಂಬಂಧ ಹೊಂದಿದ್ದ 22 ವರ್ಷ ವಯಸ್ಸಿನ ಯುವತಿಯನ್ನ (Young woman) ಕೊಲೆ, ಸಿನಿಮಾ ಶೈಲಿಯಲ್ಲಿ ಕಟ್ಟಡದ ಕೆಳಗೆ ಹೂತುಹಾಕಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ಮಣಿಕಾಂತ್ ದ್ವಿವೇದಿ ಎಂದು ಗುರುತಿಸಲಾಗಿದೆ. ಹಂತಕ ಪೊಲೀಸರನ್ನು ದಾರಿ ತಪ್ಪಿಸುವ ಸಲುವಾಗಿ ಮಲಯಾಳಂ ʻದೃಶ್ಯಂʼ ಸಿನಿಮಾ ಸ್ಟೈಲ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಆವರಣದಲ್ಲೇ ಹೂತುಹಾಕಿ, ಆಕೆಯ ಮೊಬೈಲನ್ನು ಬಸ್‌ವೊಂದರಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ಗೆ ಮೋದಿ ಭೇಟಿ – ಝೆಲೆನ್ಸ್ಕಿ ಜೊತೆ ಮಾತುಕತೆ; ಯುದ್ಧದಲ್ಲಿ ಮಡಿದ ಮಕ್ಕಳ ಸ್ಮಾರಕ ವೀಕ್ಷಿಸಿದ ಪ್ರಧಾನಿ!
ಏನಿದು ಪ್ರಕರಣ?
ಪೊಲೀಸರ (UP Police) ಮಾಹಿತಿ ಪ್ರಕಾರ, 22 ವರ್ಷ ವಯಸ್ಸಿನ ಯುವತಿ ಮಾನ್ಸಿ ಪಾಂಡೆ, ರಕ್ಷಾಬಂಧನದ ದಿನ ತನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದಳು. ಅಲ್ಲಿಂದ ಅವಳು ಮನೆಗೆ ವಾಪಸ್ ಬರಲೇ ಇಲ್ಲ. ಇದರಿಂದ ಅನುಮಾನಗೊಂಡ ಆಕೆಯ ತಂದೆ ರಾಮಸಾಗರ್ ಪಾಂಡೆ ಅವರು, ಆಕೆಯ ಚಿಕ್ಕಪ್ಪ ಮಣಿಕಾಂತ್ ಮಗಳನ್ನು ಕರೆದುಕೊಂಡು ಹೋಗಿರುವುದಾಗಿ ಆರೋಪಿಸಿ ಕೇಸ್ ದಾಖಲಿಸಿದ್ದರು. ಬಳಿಕ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದ ವೇಳೆ, ಆರೋಪಿಯು ಮಾನಸಿಯೊಂದಿಗೆ 2 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿರುವುದು ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ನೀರಜ್ ಕುಮಾರ್ ಜಾದೌನ್ ತಿಳಿಸಿದ್ದಾರೆ.
ಸಿನಿಮಾ ಸ್ಟೈಲ್‌ನಲ್ಲಿ ಕೊಲೆ ಮುಚ್ಚಿಹಾಕಲು ಪ್ಲ್ಯಾನ್!
ಇತ್ತೀಚೆಗೆ, ಮಾನಸಿ ಬೇರೊಬ್ಬರನ್ನ ಮದುವೆಯಾಗಲು ಬಯಸುವುದಾಗಿ ಹೇಳಿದ್ದಳು. ಇದರಿಂದ ಕೋಪಗೊಂಡ ಮಣಿಕಾಂತ್ ಅವಳನ್ನು ಉಸಿರುಗಟ್ಟಿಸಿ ಕೊಂದೇಬಿಟ್ಟ. ನಂತರ ಪೊಲೀಸರನ್ನ ದಾರಿ ತಪ್ಪಿಸಲು ʻದೃಶ್ಯಂʼ ಸಿನಿಮಾ ಸ್ಟೈಲ್‌ನಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಮಾನ್ಸಿಯ ಫೋನ್ ಅನ್ನು ಎಸೆದಿದ್ದಾನೆ. ನಿರ್ಮಾಣ ಹಂತದಲ್ಲಿರುವ ಕಟ್ಟಡ ಕೆಳಗೆ ಮೃತದೇಹವನ್ನು ಹೂತುಹಾಕಿದ್ದಾನೆ. ಸದ್ಯ ಮೃತದೇಹವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಟ್ರೋಲ್‌ನಿಂದ ಬೇಸತ್ತ ಆಯೇಶಾ ಟಾಕಿಯಾ- ಇನ್ಸ್ಟಾಗ್ರಾಂ ಅಕೌಂಟ್ ಡಿಲೀಟ್
ಸೋಮವಾರ (ಆ.19) ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾನ್ಸಿಯನ್ನು ಮಣಿಕಾಂತ್ ಅವರ ಮನೆಗೆ ಡ್ರಾಪ್ ಮಾಡಿದ್ದಾರೆ ಎಂದು ಸಂತ್ರಸ್ತೆಯ ತಂದೆ ರಾಮಸಾಗರ್ ಪಾಂಡೆ ಹೇಳಿದ್ದಾರೆ. ನಾವು ನಮ್ಮ ಊರಿಗೆ ಹೋಗಿದ್ದೆವು, ನಂತರ ನಾನು ಲಕ್ನೋಗೆ ಹೋಗಿದ್ದೆ. ಬುಧವಾರ, ಮಣಿಕಾಂತ್ ನನಗೆ ಕರೆ ಮಾಡಿ ಮಾನಸಿ ಕಾಣೆಯಾಗಿದ್ದಾರೆ. ಅವಳ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಹೇಳಿದ್ದ. ಇದರಿಂದ ನನಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದೆ.
ಮುಂದಿನ ನವೆಂಬರ್ 27ಕ್ಕೆ ಮಾನ್ಸಿ ಮದುವೆ ನಿಶ್ಚಯವಾಗಿತ್ತು. ಆದ್ರೆ ಮಣಿಕಾಂತ್ ಬೇರೆಯವರನ್ನ ಮದುವೆಯಾಗಬೇಡ ಪದೇ ಪದೇ ಪೀಡಿಸುತ್ತಿದ್ದ ಅಂತಲೂ ಮಾನ್ಸಿ ತಂದೆ ಹೇಳಿದ್ದಾರೆ. ಇದನ್ನೂ ಓದಿ: ಸೊಂಟ ಕಾಣಿಸುವಂತೆ ಹಸಿರು ಸೀರೆಯುಟ್ಟು ಬಂದ ಉರ್ಫಿ – ಒಳಉಡುಪು ಎಲ್ಲಿ ಹೋಯ್ತು ಅಂದ ನೆಟ್ಟಿಗರು