ಲಕ್ನೋ: ಟಿಕೆಟ್ ವಿಚಾರಕ್ಕೆ ನಡೆದ ಜಗಳದಿಂದ ಬಸ್ ಕಂಡಕ್ಟರ್ ನನ್ನೇ (Bus Conductor) ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಲರೇಬ್ ಹಶ್ಮಿ (20) ಹಾಗೂ ಮೃತ ಬಸ್ ನಿರ್ವಾಹಕನನ್ನು ವಿಶ್ವಕರ್ಮ (24) ಎಂದು ಗುರುತಿಸಲಾಗಿದೆ. ಹಶ್ಮಿ ಮೊದಲ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದಾನೆ. ಘಟನೆಯಲ್ಲಿ ವಿಶ್ವಕರ್ಮಾ ಅವರ ಕುತ್ತಿಗೆ ಹಾಗೂ ದೇಹದಲ್ಲಿ ಗಂಭೀರ ಗಾಯಗಳಾಗಿರುವುದು ಕಂಡುಬಂದಿದೆ.
Advertisement
Advertisement
ಉತ್ತರಪ್ರದೇಶದ (Uttarpradesh) ಪ್ರಗ್ಯಾರಾಜ್ ನಲ್ಲಿ (Pragyaraj) ಶುಕ್ರವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯ ಬಳಿಕ ಯುವಕ ವೀಡಿಯೋ ಮಾಡಿದ್ದು, ಅದರಲ್ಲಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನಿಸಿದ್ದಕ್ಕಾಗಿ ಹತ್ಯೆಗೈದಿರುವುದಾಗಿಯೂ ತಿಳಿಸಿದ್ದಾನೆ.
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ತೆರಳಿದಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡೇಟು ನೀಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪತಿ!
Advertisement
ವಿಶ್ವಕರ್ಮನನ್ನು ಕೊಲೆ ಮಾಡಿ ಬಸ್ಸಿನಿಂದ ಹಾರಿದ ಹಶ್ಮಿ ನೇರವಾಗಿ ಕಾಲೇಜು ಆವರಣದೊಳಗೆ ನುಗ್ಗಿದ್ದಾನೆ. ಬಳಿಕ ಅಲ್ಲಿ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾನೆ. ಅದರಲ್ಲಿ ಕೊಲೆಗೆ ಕಾರಣವನ್ನೂ ತಿಳಿಸಿದ್ದಾನೆ. ಇಷ್ಟು ಮಾತ್ರವಲ್ಲದೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಹೆಸರನ್ನೂ ಪ್ರಸ್ತಾಪಿಸಿದ್ದಾನೆ. ಕೊಲೆಗೆ ಬಳಸಿದ ಆಯುಧದೊಂದಿಗೆ ಹಶ್ಮಿ ಓಡುತ್ತಿರುವುದು ಇನ್ನೊಂದು ವೀಡಿಯೋದಲ್ಲಿ ಕಾಣಬಹುದಾಗಿದೆ.
ಈ ಸಂಬಂಧ ಬಸ್ ಚಾಲಕ ಮಂಗ್ಲ ಯಾದವ್ ಪ್ರತಿಕ್ರಿಯಸಿ, ಏಕಾಏಕಿ ಬಸ್ ಒಳಗಡೆ ಇಬ್ಬರು ಹೊಡೆದಾಡಿಕೊಂಡರು. ಗಲಾಟೆಯ ಶಬ್ಧ ಕೇಳಿದುತ್ತಿದ್ದಂತೆಯೇ ನಾನು ಬಸ್ ನಿಲ್ಲಿಸಿದೆ ಎಂದು ಹೇಳಿದರು. ಬಳಿಕ ಗಂಭೀರ ಗಾಯಗೊಂಡ ಕಂಡಕ್ಟರ್‍ನನ್ನು ಆಸ್ಪತ್ರೆಗೆ ದಾಖಲಿಸಿದೆವು.
ಪ್ರಯಾಗ್‍ರಾಜ್‍ನ ಯಮುನಾನಗರ ಪ್ರದೇಶದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅಭಿನವ್ ತ್ಯಾಗಿ ಮಾತನಾಡಿ, ಘಟನೆಯನ್ನು ಅನುಸರಿಸಿ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಆರೋಪಿಗಳ ವಿವರಗಳನ್ನು ಹಂಚಿಕೊಂಡ ಡಿಸಿಪಿ, ಹಶ್ಮಿ ನಗರದ ಯುನೈಟೆಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದು, ಪ್ರಯಾಗರಾಜ್‍ನ ಹಾಜಿಗಂಜ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.