12 ಮದುವೆ, 13ನೇ ಹೆಂಡ್ತಿಯನ್ನ ಕೊಲೆ ಮಾಡ್ದ- 14ನೇ ಮದುವೆಗೂ ರೆಡಿ!

Public TV
Public TV - Digital Head
1 Min Read

ಲಕ್ನೋ: 12 ಮಹಿಳೆಯರಿಗೆ ವಿಚ್ಛೇದನ ನೀಡಿದ್ದ ವ್ಯಕ್ತಿಯೊಬ್ಬ 14ನೇ ಮದುವೆ ಮಾಡಿಕೊಳ್ಳಲು ಮುಂದಾಗಿ, ತನ್ನ 13ನೇ ಹೆಂಡತಿಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ರಾಯ್‍ಬರೇಲಿಯಲ್ಲಿ ನಡೆದಿದೆ.

ಪತ್ನಿಯನ್ನು ಕೊಲೆ ಮಾಡಿರುವ ಆರೋಪಿ ರಾಯ್‍ಬರೇಲಿಯ ಅಮೇಥಿ ಪ್ರದೇಶದ ನಿವಾಸಿ ಮೊಹಮ್ಮದ್ ಮುಸ್ತಕೀಮ್ ಎಂದು ತಿಳಿದು ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮುಸ್ತಕೀಮ್ ನಾಲ್ಕು ವರ್ಷಗಳ ಹಿಂದೆ 13ನೇ ಮದುವೆಯಾಗಿದ್ದು, ದಂಪತಿಗೆ ಮೂರು ತಿಂಗಳ ಮಗು ಸಹ ಇದೆ. ಸ್ಥಳೀಯರು ನೀಡಿರುವ ಮಾಹಿತಿಯಂತೆ ಆರೋಪಿ ಪ್ರತಿದಿನ ತನ್ನ ಪತ್ನಿಯೊಂದಿಗೆ ಜಗಳವಾಡ್ತಿದ್ದ. ನಾಲ್ಕು ದಿನಗಳ ಹಿಂದೆ ಮೃತ ಮಹಿಳೆ ತಂದೆಯನ್ನು ಭೇಟಿ ಮಾಡಿ ಮಗಳಿಗೆ ವಿಚ್ಛೇದನ ನೀಡುವುದಾಗಿ ತಿಳಿಸಿದ್ದ.

ಮೃತ ಮಹಿಳೆಯು ಸೋಮವಾರ ಮನೆಯಿಂದ ಕಾಣೆಯಾಗಿದ್ದು, ಮಂಗಳವಾರ ರಾತ್ರಿ ಆಕೆಯ ದೇಹ ಗ್ರಾಮದ ಗದ್ದೆಯೊಂದರಲ್ಲಿ ಪತ್ತೆಯಾಗಿತ್ತು. ಅಲ್ಲದೆ ಆಕೆಯ ದೇಹದ ಮೇಲೆ ಹಲವು ಗಾಯದ ಗುರುತುಗಳಾಗಿದ್ದು, ಕತ್ತು ಹಿಸುಕಿ ಕೊಲೆ ಮಡುವ ಮುನ್ನ ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಅದೇ ರಾತ್ರಿ ಮುಸ್ತಕೀಮ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಮುಸ್ತಕೀಮ್ ತನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಅಶ್ವಾಸನೆ ನೀಡಿದ್ದರಿಂದ ಮಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟೆ ಎಂದು ಮೃತ ಮಹಿಳೆಯ ತಂದೆ ಹೇಳಿದ್ದಾರೆ. ಮೂಲಗಳ ಪ್ರಕಾರ ಆರೋಪಿ ಮುಸ್ತಕೀಮ್ 14 ನೇ ಮದುವೆ ಮಾಡಿಕೊಳ್ಳಲು ಯೋಚಿಸಿದ್ದ. ಅದಕ್ಕಾಗಿ ಹುಡುಗಿಯನ್ನೂ ಆರಿಸಿದ್ದ ಎಂದು ವರದಿಯಾಗಿದೆ.

Share This Article