ಲಖನೌ: ಉತ್ತರ ಪ್ರದೇಶದ ವಿದ್ಯುತ್ ಇಲಾಖೆಯ ಅಧಿಕಾರಿಯೊಬ್ಬರು, ತನಗೆ ವರ್ಗಾವಣೆ ಬೇಕಿದ್ದರೆ ಪತ್ನಿಯನ್ನು ರಾತ್ರಿಗೆ ಕಳುಹಿಸು ಎಂದು ಕೇಳಿದ್ದಕ್ಕೆ ಮನನೊಂದ ಉದ್ಯೋಗಿಯೊಬ್ಬರು ಡೀಸೆಲ್ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗೋಕುಲ್ ಪ್ರಸಾದ್ (45) ಅವರೇ ಲಖೀಂಪುರದ ಜೂನಿಯರ್ ಇಂಜಿನಿಯರ್ ಕಚೇರಿಯ ಹೊರಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕೇಂದ್ರೀಯ ವಿವಿ ವಿದ್ಯಾರ್ಥಿಗಳ ಮೇಲೆ ಹಲ್ಲೆ – ಮೂವರ ವಿರುದ್ಧ FIR
Advertisement
Advertisement
ಗೋಕುಲ್ ಪ್ರಸಾದ್ ಅವರು ಬೆಂಕಿ ಹಚ್ಚಿಕೊಂಡ ನಂತರ ಚಿತ್ರೀಕರಿಸಿದ ವೀಡಿಯೋದಲ್ಲಿ ಕಿರಿಯ ಇಂಜಿನಿಯರ್ ಹಾಗೂ ಅವರ ಸಹಾಯಕರು ತನಗೆ ಕಿರುಕುಳ ನೀಡುತ್ತಿದ್ದರು. ಪೊಲೀಸರನ್ನು ಸಂಪರ್ಕಿಸಿದರೂ ಯಾವುದೇ ಸಹಾಯ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ. ಮತ್ತೊಂದು ವಿಡಿಯೋದಲ್ಲಿ, ಆರೋಪಿಗಳು ಕಳೆದ ಮೂರು ವರ್ಷಗಳಿಂದಲೂ ತನ್ನ ಪತಿಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಆತನ ಪತ್ನಿ ಆರೋಪಿಸಿದ್ದಾರೆ.
Advertisement
ತನ್ನ ಪತಿ ಖಿನ್ನತೆಗೆ ಒಳಗಾಗಿ ಔಷಧಿ ತೆಗೆದುಕೊಳ್ಳಲು ಪ್ರಾರಂಭಿಸಿದರು. ಆದರೂ, ಅಲಿಗಂಜ್‌ಗೆ ವರ್ಗಾಯಿಸಲಾಯಿತು. ಅವರಿಗೆ ಪ್ರಯಾಣಿಸಲು ಕಷ್ಟವಾಗುತ್ತಿದ್ದರಿಂದ ಮನೆಯ ಸಮೀಪದಲ್ಲೇ ಇರುವ ಕಚೇರಿಗೆ ವರ್ಗಾಯಿಸುವಂತೆ ಮನವಿ ಮಾಡಿದರು. ಈ ವೇಳೆ ಅಲ್ಲಿನ ಅಧಿಕಾರಿಗಳು ನಿನ್ನ ಹೆಂಡತಿಯನ್ನು ನಮ್ಮೊಂದಿಗೆ ಮಲಗುವಂತೆ ಮಾಡಿ, ಆಗ ನಾವು ವರ್ಗಾವಣೆ ಮಾಡುತ್ತೇವೆಂದು ಹೇಳಿದ್ದಾರೆ. ಇದರಿಂದ ಅವರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವಾಗಲೂ ಯಾರೂ ತಪ್ಪಿಸಲು ಸಹಾಯ ಮಾಡಲಿಲ್ಲ ಎಂದು ದೂರಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್ ಬದಲಿಗೆ `ಲವ್ ಕೇಸರಿ’ ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ಕರೆ
Advertisement
ಘಟನೆ ಸಂಬAಧ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಸಂಜೀವ್ ಸುಮನ್, ಗೋಕುಲ್‌ಪ್ರಸಾದ್ ವರ್ಗಾವಣೆ ಕೋರಿದಾಗ ಜೂನಿಯರ್ ಇಂಜಿನಿಯರ್ ಹಣದ ಬೇಡಿಕೆ ಮತ್ತು ಅಸಭ್ಯ ಹೇಳಿಕೆಯನ್ನೂ ನೀಡಿದ್ದಾರೆ. ಹಾಗಾಗಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಜೂನಿಯರ್ ಇಂಜಿನಿಯರ್ ಅನ್ನು ಅಮಾನತುಗೊಳಿಸಿ, ವಿಚಾರಣೆಗೆ ಒಳಪಡಿಸಲಾಗಿದೆ.