– ಸೋಲಿನಲ್ಲೇ ಶತಕ ಬಾರಿಸುವ ಗುರಿ ಹೊಂದಿದ್ದಾರೆ ಆಗ್ರಾದ ಅಭ್ಯರ್ಥಿ
ಲಕ್ನೋ: ದೇಶದಲ್ಲಿ ಈಗಾಗಲೇ ಲೋಕಸಭಾ ಚುನಾವಣೆ (Lok Sabha Elections) ಆರಂಭವಾಗಿದೆ. ಏಪ್ರಿಲ್ 19ರಿಂದ ಮೊದಲ ಹಂತದ ಚುನಾವಣೆ ಶುರುವಾಗಿದ್ದು, 21 ರಾಜ್ಯಗಳ 102 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಮೊದಲ ಹಂತದ ಚುನಾವಣೆಯಲ್ಲಿ ಅತ್ಯಂತ ಶ್ರೀಮಂತ ಹಾಗೂ ಶೂನ್ಯ ಆಸ್ತಿ ಹೊಂದಿದ್ದ ಬಡ ಅಭ್ಯರ್ಥಿಗಳನ್ನೂ ನೋಡಿದ್ದೇವೆ. ಆದ್ರೆ ಉತ್ತರ ಪ್ರದೇಶದಲ್ಲೊಬ್ಬ ವ್ಯಕ್ತಿ ಸೋಲಿನಲ್ಲೇ ಶತಕ ಬಾರಿಸಲು ಮುಂದಾಗಿದ್ದಾರೆ.
ಈಗಾಗಲೇ 98 ಚುನಾವಣೆಗಳಲ್ಲಿ ಸೋತಿರುವ ಆಗ್ರಾದ ರಾಮನಗರ ನಿವಾಸಿಯಾಗಿರುವ ಹಸ್ನೂರಾಮ್ ಅಂಬೇಡ್ಕರ್ (Hasnuram Ambedkari) 99ನೇ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. 100ನೇ ಚುನಾವಣೆಯಲ್ಲಿ ತಾನು ಸೋತ ಬಳಿಕ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: Lok Sabha Elections 2024: ಮಣಿಪುರದ 11 ಬೂತ್‌ಗಳಲ್ಲಿ ಇಂದು ಮರು ಮತದಾನ
Advertisement
Advertisement
ಹೌದು. ಹಸ್ನೋರಾಮ್ ಅಂಬೇಡ್ಕರ್ 1985 ರಿಂದ ಇಲ್ಲಿಯವರೆಗೆ ಎಲ್ಲಾ ಮಾದರಿಯ ಚುನಾವಣೆಗಳಿಂದ 98 ಬಾರಿ ಸ್ಪರ್ಧಿಸಿ ಸೋತಿದ್ದಾರೆ. ಈ ಬಾರಿ ಶತಕ ಬಾರಿಸಲೇಬೇಕೆಂದು ಆಗ್ರಾ ಮತ್ತು ಫತೇಪುರ್ ಸಿಕ್ರಿಯಿಂದ ನಾಮಪತ್ರ ಸಲ್ಲಿಸಿದ್ದರು. ಆದ್ರೆ ಫತೇಪುರ್ ಸಿಕ್ರಿಯಲ್ಲಿ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ 99ನೇ ಬಾರಿ ಕಣಕ್ಕಿಳಿಯುವ ಮೂಲಕ ಸುದ್ದಿಯಾಗಿದ್ದಾರೆ.
Advertisement
ಕಳೆದ 4 ದಶಕಗಳಿಂದ ವಿಧಾನಸಭೆ, ಲೋಕಸಭೆ, ಪಂಚಾಯ್ತಿ ಚುನಾವಣೆಗಳು, ಸ್ಥಳೀಯ ಸಂಸ್ಥೆ ಮತ್ತು ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್ (ಬಿಡಿಸಿ)ಗೆ ನಡೆದ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಅಲ್ಲದೇ ಅಷ್ಟೂ ಚುನಾವಣೆಯನ್ನೂ ತಮ್ಮ ಸ್ವಂತ ಖರ್ಚಿನಿಂದಲೇ ಎದುರಿಸುತ್ತಿದ್ದಾರೆ ಎಂಬುದು ವಿಶೇಷ. ಈ ಹಿಂದೆ ಬಹುಜನ ಸಮಾಜವಾದಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು ಆದ್ರೆ ಪಕ್ಷ ಟಿಕೆಟ್ ನಿರಾಕರಿಸಿದ್ದರಿಂದ ಸ್ವತಂತ್ರವಾಗಿ ಸ್ಪರ್ಧಿಸಲು ಶುರು ಮಾಡಿದ್ದಾರೆ.
Advertisement
2,768 ಮತ ಪಡೆದಿದ್ದ ಹಸ್ನೂರಾಮ್:
ಸತತ ಸೋಲುಗಳನ್ನೇ ಕಂಡಿದ್ದರೂ ಉತ್ಸಾಹ ಕಳೆದುಕೊಳ್ಳದ ಹಸ್ನೋರಾಮ್ 2019ರ ಲೋಕಸಭಾ ಚುನಾವಣೆಯಲ್ಲಿ ಆಗ್ರಾದಿಂದ ಸ್ಪರ್ಧಿಸಿ 2,768 ಮತಗಳನ್ನು ಪಡೆದುಕೊಂಡಿದ್ದರು.
ಈ ಕುರಿತು ಮಾತನಾಡಿರುವ ಹಸ್ನೂರಾಮ್ ನಾನು ಯಾವುದೇ ಕಾರಣಕ್ಕೂ ಗೆಲ್ಲೋದಿಲ್ಲ ಅನ್ನೋದು ಗೊತ್ತಿದೆ. ಆದ್ರೆ 100 ಚುನಾವಣೆಗಳಲ್ಲಿ ಸ್ಪರ್ಧಿಸಲೇಬೇಕೆಂಬುದು ನನ್ನ ಗುರಿ. 100ನೇ ಚುನಾವಣೆಯಲ್ಲಿ ಸೋತ ನಂತರ ಸ್ಪರ್ಧಿಸುವುದನ್ನು ಬಿಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: 14 ವರ್ಷದ ಅಪ್ರಾಪ್ತೆಯ ಗರ್ಭಪಾತಕ್ಕೆ ಸುಪ್ರೀಂಕೋರ್ಟ್ ಅನುಮತಿ