ಲಕ್ನೋ: ಉತ್ತರ ಪ್ರದೇಶದ 71 ವರ್ಷದ ವೃದ್ಧರೊಬ್ಬರು ಮತಗಟ್ಟೆಯಲ್ಲಿ ಮತ ಚಲಾಯಿಸಿದ ಕೆಲವೇ ಹೊತ್ತಿನಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಥುರಾ ಜಿಲ್ಲೆಯ ಬಲ್ದೇವ್ ವಿಧಾನಸಭಾ ಕ್ಷೇತ್ರದ ಮಹಾವನ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ನಾತಿ ಲಾಲ್ ಬಘೇಲ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಜನರನ್ನು ತಣ್ಣಗಾಗಿಸುವ ಬದಲು ಉದ್ಯೋಗವಕಾಶ ಹೆಚ್ಚಿಸಿ: ಯೋಗಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ
Advertisement
Advertisement
ನಾಗ್ಲಾ ಪಿಪ್ರಿ ನಿವಾಸಿಯಾಗಿರುವ ನಾತಿ ಲಾಲ್ ಬಘೇಲ್ ಅವರು ತಮ್ಮ ಸೋದರಳಿಯನೊಂದಿಗೆ ಮತದಾನ ಮಾಡಲು ಗ್ರಾಮದ ಬಳಿಯ ಶಹಪುರ ಮತಗಟ್ಟೆಗೆ ತೆರಳಿದ್ದರು. ಮತದಾನ ಮಾಡಿ ಬಾಗಿಲಿನಿಂದ ಹೊರ ಬಂದ ನಂತರ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಹೀಗಾಗಿ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟೋತ್ತಿಗೆ ವ್ಯಕ್ತಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
Advertisement
ವೈದ್ಯರು ಇದನ್ನು ಸಹಜ ಸಾವು ಎಂದು ದೃಢಪಡಿಸಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆಯನ್ನು ನಡೆಸಲು ಮುಂದಾದರು, ಆದರೆ ಮೃತ ವ್ಯಕ್ತಿಯ ಕುಟುಂಬಸ್ಥರು ಇದನ್ನು ತಿರಸ್ಕರಿಸಿದ ಕಾರಣ ಶವವನ್ನು ಅವರಿಗೆ ಹಸ್ತಾಂತರಿಸಲಾಯಿತು ಎಂದು ಮಹಾವನ್ ಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಯೋಗಿ ವೇಷ ತೊಟ್ಟು ಮತಗಟ್ಟೆಗೆ ಬಂದ ವ್ಯಕ್ತಿ – ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದ ಜನ