ಲಕ್ನೋ: ಉತ್ತರ ಪ್ರದೇಶ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಸೋಮವಾರ ಹ್ಯಾಕ್ ಮಾಡಲಾಗಿದೆ.
ಶನಿವಾರ ಮುಖ್ಯಮಂತ್ರಿ ಕಚೇರಿಯ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿದ ಎರಡು ದಿನಗಳ ನಂತರ ಟ್ವಿಟ್ಟರ್ ಖಾತೆಯಿಂದ ಮುಖ್ಯಮಂತ್ರಿಗಳ ಡಿಸ್‍ಪ್ಲೇ ಚಿತ್ರವನ್ನು ಹ್ಯಾಕರ್‌ಗಳು ತೆಗೆದುಹಾಕಿದ್ದರು.
Advertisement
Advertisement
ಸೋಮವಾರ ಉತ್ತರ ಪ್ರದೇಶ ಸರ್ಕಾರದ ಅಧಿಕೃತ ಖಾತೆಯಿಂದ ವಿಚಿತ್ರ ಟ್ವೀಟ್‍ಗಳನ್ನು ಪೋಸ್ಟ್ ಮಾಡಲಾಗಿದೆ. ಸ್ವಲ್ಪ ಸಮಯದ ನಂತರ ಟ್ವೀಟ್‍ಗಳನ್ನು ಅಳಿಸಲಾಗಿದೆ. ನಂತರದ ಟ್ವೀಟ್‍ಗಳಲ್ಲಿ, ಹಲವಾರು ಅಸಂಬಂಧ ಖಾತೆಗಳನ್ನು ಟ್ಯಾಗ್ ಮಾಡಲಾಗಿದೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಹೆಸರಿನಲ್ಲಿ ಅಶ್ಲೀಲ ವೀಡಿಯೋ ಪೋಸ್ಟ್: ದೂರು ದಾಖಲು
Advertisement
Advertisement
ಯುಪಿ ಸಿಎಂಒ ಅಧಿಕೃತ ಟ್ವಿಟ್ಟರ್ ಅನ್ನು ಹ್ಯಾಕರ್‌ಗಳು ತೆಗೆದುಕೊಂಡ ನಂತರ, ಖಾತೆಯಿಂದ 400-500 ಕ್ಕೂ ಹೆಚ್ಚು ಟ್ವೀಟ್‍ಗಳನ್ನು ಮಾಡಲಾಗಿದೆ. ಇದನ್ನೂ ಓದಿ: ಕೋವಿಡ್ ಉಲ್ಬಣದಿಂದ ದೆಹಲಿಯಲ್ಲಿ ಶಾಲೆಗಳು ಬಂದ್? – ತಜ್ಞರ ಸಮಿತಿಯ ಸಲಹೆಗಳೇನು?
ಈ ಸಂಬಂಧ ಲಕ್ನೋದ ಸೈಬರ್ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.