ಲಕ್ನೋ: ಕೊರೊನಾ ತೀವ್ರವಾಗಿ ವ್ಯಾಪಿಸಿದ್ದ 2020ರ ವೇಳೆ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿ, ಬಹುತೇಕ ವಲಸೆ ಕಾರ್ಮಿಕರು ಅನಿವಾರ್ಯವಾಗಿ ತಮ್ಮ ರಾಜ್ಯಗಳಿಗೆ ಹೋಗಲೇಬೇಕಿತ್ತು.
Advertisement
ಬಹುತೇಕರು ತಾವು ತಲುಪುವುದೇ ಕಷ್ಟವಾಗಿದ್ದರಿಂದ ತಮ್ಮ ವಸ್ತುಗಳನ್ನು ತಾವಿದ್ದ ಸ್ಥಳಗಳಲ್ಲೇ ಬಿಟ್ಟು ಹೋಗಿದ್ದರು. ಇನ್ನೂ ದಿನಗೂಲಿ ಕಾರ್ಮಿಕರು ಹೆಚ್ಚಾಗಿ ಬಳಸುತ್ತಿದ್ದ ಸೈಕಲ್ ಪಾಡಂತೂ ಕೇಳೋರೇ ಇಲ್ಲದಂತಾಗಿತ್ತು. ಇದರಿಂದ ಸಾವಿರಾರು ಮಂದಿ ತಮ್ಮ ಬೈಸಿಕಲ್‌ಗಳನ್ನು ಇಲ್ಲಿಯೇ ಬಿಟ್ಟುಹೋದರು. ಇಂತಹ ಬಿಟ್ಟು ಹೋಗಿದ್ದ ಸೈಕಲ್‌ಗಳು ಇದೀಗ ಲಕ್ಷಾಂತರ ರೂಪಾಯಿ ಆದಾಯ ತಂದುಕೊಟ್ಟಿವೆ. ಇದನ್ನೂ ಓದಿ: ಬಿಜೆಪಿ ಎಚ್ಚೆತ್ತುಕೊಂಡಿರುವುದು ಮುಸ್ಲಿಮರ ಭಾವನೆಗೆ ಧಕ್ಕೆಯುಂಟಾಗಿದೆ ಎಂದಲ್ಲ: ಒಮರ್ ಅಬ್ದುಲ್ಲಾ
Advertisement
Advertisement
ರಾಶಿ-ರಾಶಿ ಸೈಕಲ್‌ಗಳು: ಕೋವಿಡ್ ಮೊದಲ ಅಲೆಯಲ್ಲಿ ಉಂಟಾದ ಲಾಕ್‌ಡೌನ್ ವೇಳೆ ಉತ್ತರ ಪ್ರದೇಶ ಮತ್ತು ಬಿಹಾರದ ವಲಸೆ ಕಾರ್ಮಿಕರು ಬಿಟ್ಟು ಹೋಗಿದ್ದ 5,400 ಬೈಸಿಕಲ್‌ಗಳನ್ನು ಸಹರಾನ್‌ಪುರ ಜಿಲ್ಲಾಡಳಿತವು 2 ವರ್ಷಗಳ ನಂತರ ಹರಾಜು ಮಾಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಎಚ್ಚೆತ್ತುಕೊಂಡಿರುವುದು ಮುಸ್ಲಿಮರ ಭಾವನೆಗೆ ಧಕ್ಕೆಯುಂಟಾಗಿದೆ ಎಂದಲ್ಲ: ಒಮರ್ ಅಬ್ದುಲ್ಲಾ
Advertisement
21.2 ಲಕ್ಷ ಸಂಗ್ರಹ: 5,400 ಬೈಸಿಕಲ್‌ಗಳನ್ನು ಹರಾಜು ಮಾಡಲಾಗಿದ್ದು ಇದರಿಂದ 21.2 ಲಕ್ಷ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ಹರಿದು ಬಂದಿದೆ ಎಂದು ಸದರ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಕಿನ್‌ಶುಕ್ ಶ್ರೀವಾಸ್ತವ ತಿಳಿಸಿದ್ದಾರೆ.