ಲಕ್ನೋ: ಇತ್ತೀಚೆಗೆ ಪ್ರತಿನಿತ್ಯ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕಿರುಕುಳದ ಪ್ರಕರಣಗಳು ನಡೆಯುತ್ತಿವೆ. ಆದ್ರೆ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಮಹಿಳೆಯರಿಗೆ ಸೂಕ್ತ ಕಾಲದಲ್ಲಿ ಸಹಾಯ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಯುವತಿಯರ ರಕ್ಷಣೆಗಾಗಿ ಉತ್ತರ ಪ್ರದೇಶ ರಾಜ್ಯದ ಫಾರುಖಾಬಾದ್‍ನ ಯುವತಿ ಜಿಪಿಎಸ್ ಉಳ್ಳ ಒಳಉಡುಪನ್ನು ತಯಾರಿಸಿದ್ದಾರೆ.
ಸೀನು ಕುಮಾರಿ ಎಂಬವರು ಈ ವಿಶೇಷ ಒಳ ಉಡುಪನ್ನು ತಯಾರಿಸಿದ್ದಾರೆ. ಈ ಒಳ ಉಡುಪಿನಲ್ಲಿ ಚಿಕ್ಕದಾದ ಲಾಕ್ ಅಳವಡಿಸಲಾಗಿದ್ದು, ಅದಕ್ಕೆ ಪಾಸ್‍ವರ್ಡ್ ನೀಡಲಾಗುತ್ತದೆ. ಪಾಸ್‍ವರ್ಡ್ ನೀಡುವರೆಗೂ ಅದು ತೆರೆಯುವದಿಲ್ಲ. ಹಾಗೆಯೇ ಬಟ್ಟೆಯಲ್ಲಿ ಜಿಪಿಎಸ್ ಯಂತ್ರವನ್ನು ಜೋಡಣೆ ಮಾಡಲಾಗಿದೆ. ಜಿಪಿಎಸ್ ನೀವಿರುವ ಸ್ಥಳದ ಮಾಹಿತಿಯನ್ನು ನಿಮ್ಮ ಪೋಷಕರಿಗೆ ನೀಡುತ್ತದೆ. ಉಡುಪಿನ ಮಧ್ಯಭಾಗದಲ್ಲಿ ಲಾಕ್ ಜೋಡಿಸಲಾಗಿದ್ದು, ಕೊನೆಗೆ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸೀನು ಕುಮಾರಿ ಈ ವಿಶಿಷ್ಟ ತಂತ್ರಜ್ಞಾನವುಳ್ಳ ಒಳಉಡುಪನ್ನು ತಯಾರಿಸಲು 4300 ರೂ.ಗಳನ್ನು ಖರ್ಚು ಮಾಡಿದ್ದಾರೆ.
Advertisement
ಒಂದು ವೇಳೆ ಯಾವುದೇ ಕಾಮುಕರು ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ರೆ, ಜಿಪಿಎಸ್ ಮೂಲಕ ನಾವು ಫೀಡ್ ಮಾಡಿರುವ ಮೆಸೇಜ್ ಕಳುಹಿಸಿಬಹುದು. ಈ ವೇಳೆ ದುಷ್ಕರ್ಮಿಗಳ ಮುಖವನ್ನು ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಸೀನುಕುಮಾರಿ ತಾವು ತಯಾರಿಸಿರುವ ಒಳ ಉಡುಪಿನ ಮಾದರಿಯನ್ನು ಅಲಹಬಾದ್ ನ್ಯಾಷನಲ್ ಇನೋವೆಷನ್ ಫೌಂಡೇಶನ್ ಗೆ ಕಳುಹಿಸಲು ನಿರ್ಧರಿಸಿದ್ದಾರೆ.
Advertisement
https://www.youtube.com/watch?time_continue=181&v=2tPXShZjzbA