ಲಕ್ನೋ: ಜಿಮ್ ಟ್ರೈನರ್‌ಗೆ (Gym Trainer) ಕುರ್ಚಿಯ (Chair) ಮೇಲೆ ಕುಳಿತಿದ್ದಾಗ ಹೃದಯಾಘಾತವಾಗಿ (Heart Attack) ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.
ಆದಿಲ್ (33) ಮೃತ ವ್ಯಕ್ತಿ. ಈತ ಗಾಜಿಯಾಬಾದ್‍ನ ಶಾಲಿಮಾರ್ ಗಾರ್ಡನ್ ಪ್ರದೇಶದಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಪ್ರತಿದಿನ ವ್ಯಾಯಾಮ ಹಾಗೂ ಜಿಮ್‍ನಲ್ಲಿ ಅನೇಕ ಕಸರತ್ತುಗಳನ್ನು ಮಾಡುತ್ತಿದ್ದ. ಆದರೆ ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ಆದರೂ ಆದಿಲ್ ಜಿಮ್‍ಗೆ ಹೋಗುವುದನ್ನು ನಿಲ್ಲಿಸಿರಲಿಲ್ಲ. ಇದನ್ನೂ ಓದಿ: ಹಲಾಲ್ ಮುಕ್ತ ದೀಪಾವಳಿ ಅಭಿಯಾನ – ಮೆಕ್ಡೊನಾಲ್ಡ್, ಕೆಎಫ್‌ಸಿ, ಪಿಜ್ಜಾ ಹಟ್‌ಗೆ ಬಾಯ್ಕಾಟ್
ಇತ್ತೀಚೆಗಷ್ಟೇ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಮುಂದಾಗಿದ್ದ ಆತ, ಶಾಲಿಮಾರ್ ಗಾರ್ಡನ್‍ನಲ್ಲಿ ಕಚೇರಿ ತೆರೆದಿದ್ದ. ಕಚೇರಿಯಲ್ಲಿ ಕುಳಿತಿದ್ದಾಗಲೇ ಆದಿಲ್‍ಗೆ ಹೃದಯಾಘಾತವಾಗಿತ್ತು. ತಕ್ಷಣ ಆತನ ಸಹಾಯಕರು ಆದಿಲ್‍ನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದರೂ, ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಈ ಘಟನೆ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ದಾಂಡಿಯಾ ನೃತ್ಯ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ವ್ಯಕ್ತಿ ಸಾವು