ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಬಾಬಾ ಅವರಿಗೆ ಏನೂ ತಿಳಿದಿಲ್ಲ ಎನ್ನುವುದರ ಮೂಲಕ ಯೋಗಿ ಆದಿತ್ಯನಾಥ್ ಅವರ ಆರೋಪಕ್ಕೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಾಬಾ ಸಿಎಂ ಅವರು ಅದ್ಭುತವಾಗಿದ್ದಾರೆ. ಈ ಹಿಂದೆಯೂ ಅವರಿಗೆ ಏನೂ ತಿಳಿದಿರಲಿಲ್ಲ. ಈಗಲೂ ಏನು ತಿಳಿದಿಲ್ಲ. ಉತ್ತರ ಪ್ರದೇಶ ಚುನಾವಣೆ ರೈತರ ಹಕ್ಕು ಹಾಗೂ ಯುವಕರ ಉದ್ಯೋಗ ಮತ್ತು ಅಭಿವೃದ್ಧಿಗಾಗಿ ನಡೆಯುತ್ತಿದೆ ಎಂದು ತಿಳಿಸಿದರು.
Advertisement
Advertisement
ಈ ಹಿಂದೆ ಚುನಾವಣಾ ರ‍್ಯಾಲಿಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ಅಹಮದಾಬಾದ್ ಸ್ಫೋಟದ ಆರೋಪಿಯ ಸಂಬಂಧಿಕರು ಎಸ್‌ಪಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ ಅವರು, 2008ರ ಸರಣಿ ಸ್ಫೋಟ ಪ್ರಕರಣದಲ್ಲಿ 38 ಭಯೋತ್ಪಾದಕರಿಗೆ ಅಹಮದಾಬಾದ್ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ. ಅವರಲ್ಲಿ ಉತ್ತರಪ್ರದೇಶದ ಕೆಲವು ಭಯೋತ್ಪಾದಕರೂ ಸೇರಿದ್ದಾರೆ. ಮತ್ತು ಅವರಲ್ಲಿ ಒಬ್ಬರ ಕುಟುಂಬವು ಎಸ್‌ಪಿ ಮುಖ್ಯಸ್ಥರೊಂದಿಗೆ ಪಕ್ಷಕ್ಕೆ ಮತ ಕೇಳುತ್ತಿರುವುದು ಕಂಡುಬಂದಿದೆ ಎಂದು ಕಿಡಿಕಾರಿದ್ದರು. ಇದನ್ನೂ ಓದಿ: ಚೀನಾ-ಭಾರತದ ಸಂಬಂಧ ಬಿಗಡಾಯಿಸುತ್ತಿದೆ: ಜೈಶಂಕರ್
Advertisement
Advertisement
ಅಲ್ಲದೆ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಎಸ್‌ಪಿ 2008ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಭಯೋತ್ಪಾದಕರಿಗೆ ರಕ್ಷಣೆ ನೀಡುತ್ತಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ