ಲಕ್ನೋ: ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಪುನಃ ಉದ್ಯೋಗವನ್ನು ಒದಗಿಸಲು ಬದ್ಧವಾಗಿದೆ ಎಂದು ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್ ಭರವಸೆ ನೀಡಿದರು.
ಸಿದ್ಧಾರ್ಥನಗರ, ಬಸ್ತಿ ಮತ್ತು ಸಂತ ಕಬೀರ್ ನಗರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಸಮಾಜವಾದ ಪಕ್ಷ ಸರ್ಕಾರ ರಚಿಸಿದರೆ ಪೊಲೀಸ್ ಮತ್ತು ಸೇನೆಯಲ್ಲಿ ನೇಮಕಾತಿ ಹೆಚ್ಚಿಸುವುದರ ಜೊತೆಗೆ 300 ಯೂನಿಟ್ ವಿದ್ಯುತ್‍ನ್ನು ಉಚಿತವಾಗಿ ಪೂರೈಕೆ ಮಾಡಲಾಗುವುದು ಎಂದರು.
Advertisement
Advertisement
ಯೋಗಿ ಆದಿತ್ಯನಾಥ್ ಅವರ ವಿರುದ್ಧ ಕಿಡಿಕಾರಿದ ಅವರು, ಇತ್ತೀಚೆಗೆ ಬಾಬಾ ಸಿಎಂ ಮುಖ ನೋಡಿದ್ದೀರಾ? ಅವನು ಬೆಚ್ಚಿಬೀಳುತ್ತಿದ್ದಾರೆ. ಹಿಂದೊಮ್ಮೆ ಅವರೇ ಮಧ್ಯಾಹ್ನ 12 ಗಂಟೆಗೆ ಏಳುತ್ತೇನೆ ಎಂದು ಹೇಳಿದ್ದರು. ಅಂದಿನಿಂದ, ನಾವು ಅವರ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿದ್ದೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉಕ್ರೇನ್‍ನಿಂದ ಬಂದವರಿಗೆ ಕೋವಿಡ್-19 ರೂಲ್ಸ್ ನಿಂದ ವಿನಾಯಿತಿ
Advertisement
Advertisement
ಬಿಜೆಪಿಯವರು ಸಾರ್ವಜನಿಕರಿಗೆ ಸುಳ್ಳು ಹೇಳುತ್ತಿದ್ದಾರೆ. ಸಣ್ಣ ನಾಯಕರು ಸಣ್ಣ ಸುಳ್ಳನ್ನು ಹೇಳುತ್ತಾರೆ. ದೊಡ್ಡ ನಾಯಕರು ದೊಡ್ಡ ಸುಳ್ಳನ್ನು ಹೇಳುತ್ತಾರೆ. ಹಾಗೇ ಅವರು ವಿಮಾನಗಳು, ವಿಮಾನ ನಿಲ್ದಾಣಗಳು, ಹಡಗು, ಬಂದರು, ರೈಲು ಹಾಗೂ ರೈಲು ನಿಲ್ದಾಣಗಳನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಿಸಿದ ಶಿಮುಲ್