ಲಕ್ನೋ: ಸಂವಿಧಾನದ ಆಶಯದಲ್ಲಿ ದೇಶವನ್ನು ಮುನ್ನಡೆಸಲಾಗುತ್ತದೆಯೇ ಹೊರತು ಷರಿಯಾ ಕಾನೂನಿನ ರೀತಿಯಲ್ಲಿ ಅಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು.
ಬಿಜೆಪಿ ಅಭ್ಯರ್ಥಿಯ ಪರ ಪ್ರಚಾರ ನಡೆಸುವ ಸಂದರ್ಭದಲ್ಲಿ ಹಿಜಬ್ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಸಂವಿಧಾನದ ಆಧಾರವಾಗಿ ಮಾಡಬೇಕು. ಪ್ರತಿಯೊಂದು ಸಂಸ್ಥೆಗೂ ವಸ್ತ್ರಸಂಹಿತೆಯನ್ನು ನಡೆಸುವ ಹಕ್ಕಿದೆ. ಆದರೆ ಅದು ಸಂವಿಧಾನದ ಅನ್ವಯ ನಡೆಯಬೇಕು ಎಂದು ಶಿಕ್ಷಣ ಸಂಸ್ಥೆಗಳಿಗೆ ಸಮವಸ್ತ್ರ ಕಡ್ಡಾಯವಾಗಿದೆ. ಶಿಕ್ಷಣ ಸಂಸ್ಥೆಗಳನ್ನು ಷರಿಯತ್ ನಡೆಸುವ ಯಾವುದೇ ಪ್ರಯತ್ನವು ದೇಶದ ಹಿತಾಸಕ್ತಿಗೆ ಒಳ್ಳೆಯದಲ್ಲ ಎಂದು ತಿಳಿಸಿದರು. ಇದನ್ನೂ ಓದಿ: 4 ಬಾರಿ ಕಾರ್ಡಿಯಾಕ್ ಅರೆಸ್ಟ್‌ಗೆ ಒಳಗಾಗಿದ್ದ ಮಹಿಳೆ ವೆಂಟಿಲೇಟರ್ ಸಪೋರ್ಟ್ ಇಲ್ಲದೇ ಸೇಫ್!
Advertisement
Advertisement
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯು 7 ಹಂತದಲ್ಲಿ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಈಗಾಗಲೇ ಕೊನೆಗೊಂಡಿದೆ. ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳು ಪ್ರಬಲ ಪೈಪೋಟಿಯಲ್ಲಿದೆ. ಇದನ್ನೂ ಓದಿ: ಬಿಜೆಪಿ ಸುಳ್ಳುಗಾರರ ಪಕ್ಷ: ಅಖಿಲೇಶ್ ಯಾದವ್