ಲಕ್ನೋ: ನೋಯ್ಡಾದಿಂದ ಸ್ಪರ್ಧಿಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪುತ್ರ ಪಂಕಜ್ ಸಿಂಗ್ 1,37,534 ಮತಗಳ ಅಂತರದಿಂದ ಗೆದ್ದು ದಾಖಲೆ ನಿರ್ಮಿಸಿದ್ದಾರೆ.
Advertisement
ಬಿಜೆಪಿ ಅಭ್ಯರ್ಥಿ ಪಂಕಜ್ ಸಿಂಗ್ ಒಟ್ಟು 1,79,910 ಮತ ಪಡೆದು ಸಮಾಜವಾದಿ ಪಕ್ಷದ ಸುನೀಲ್ ಚೌಧರಿ ವಿರುದ್ಧ 1,37,534 ಮತಗಳ ಅಂತರದಿಂದ ಗೆದ್ದಿದ್ದಾರೆ. ಸುನೀಲ್ ಚೌಧರಿ ಕೇವಲ 42,376 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಇದನ್ನೂ ಓದಿ: 5 ವರ್ಷ ಪೂರ್ಣಗೊಳಿಸಿ ಮತ್ತೆ ಅಧಿಕಾರಕ್ಕೇರಿದ ಮೊದಲ ಯುಪಿ ಸಿಎಂ ಯೋಗಿ
Advertisement
ನೋಯ್ಡಾದಲ್ಲಿ ಮೊದಲ ಹಂತದ ಮತದಾನ ಫೆ.10 ರಂದು ನಡೆದಿತ್ತು. ನೋಯ್ಡಾ ಕ್ಷೇತ್ರದ ಬಗ್ಗೆ ಕೇಂದ್ರ ಮತ್ತು ರಾಜ್ಯ ಹೆಚ್ಚಿನ ಒತ್ತು ನೀಡಿತ್ತು. ನರೇಂದ್ರ ಮೋದಿ ಮತ್ತು ಆದಿತ್ಯನಾಥ್ ಈ ಹಿಂದೆ ಹಲವು ಯೋಜನೆಗಳನ್ನು ನೋಯ್ಡಾದಲ್ಲಿ ಆರಂಭಿಸಿದ್ದರು.
Advertisement
Advertisement
2017ರಲ್ಲಿ ನೋಯ್ಡಾದಿಂದ ಸ್ಪರ್ಧಿಸಿದ್ದ ಪಂಕಜ್ ಸಿಂಗ್, ಸುನೀಲ್ ಚೌಧರಿ ವಿರುದ್ಧ 1,04,016 ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ ಮತ್ತೆ ಗೆಲುವಿನ ಅಂತರವನ್ನು ಮತ್ತಷ್ಟು ಹಿಗ್ಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ್‌ನಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ?
ಈ ಹಿಂದೆ ಎನ್‍ಸಿಪಿ ನಾಯಕ ಅಜಿತ್ ಪವಾರ್ ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸಿ 1,60,965 ಅಂತರದಿಂದ ಗೆದ್ದು ದಾಖಲೆ ಹೊಂದಿದ್ದರು. ಈ ದಾಖಲೆಯನ್ನು ಪಂಕಜ್ ಸಿಂಗ್ ಮುರಿದು ನೂತನ ದಾಖಲೆ ನಿರ್ಮಿಸಿದ್ದಾರೆ.