ಲಕ್ನೋ: ಸಮಾಜವಾದಿ ಪಕ್ಷದ ಕೆಂಪು ಟೋಪಿಯನ್ನು ಅವಮಾನಿಸುವವರು ವಿಭಿನ್ನ ಬಣ್ಣದ ಟೋಪಿಯನ್ನು ಜನರಿಗೆ ಧರಿಸಲು ಒತ್ತಾಯಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರಣಾಸಿಯ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಅವರು ಕೇಸರಿ ಟೋಪಿಯನ್ನು ಧರಿಸಿದ್ದನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.
Advertisement
Advertisement
ನಮ್ಮ ಪಕ್ಷದ ಟೋಪಿಯನ್ನು ಅವಮಾನಿಸಿದವರು ಈಗ ಉತ್ತರಪ್ರದೇಶದ ಜನರಿಗೆ ಬೇರೆ ಟೋಪಿಯನ್ನು ಧರಿಸಲು ಒತ್ತಾಯಿಸುತ್ತಿದ್ದಾರೆ. ಜೊತೆಗೆ ತಮ್ಮ ಟೋಪಿಯ ಬಣ್ಣವನ್ನು ಬದಲಾಯಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
Advertisement
ಕಳೆದ ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಮಾತನಾಡಿ, ಸಮಾಜವಾದಿ ಪಕ್ಷದ ಚಿಹ್ನೆ ಕೆಂಪು ಟೋಪಿಯಾಗಿದೆ. ಕೆಂಪು ಅಪಾಯಕಾರಿ. ಇದರಿಂದಾಗಿ ಎಚ್ಚರಿಕೆಯಿಂದ ಇರಿ ಎಂದು ತಿಳಿಸಿದ್ದರು.
Advertisement
ಅಖಿಲೇಶ್ ಯಾದವ್ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿ ಲಕ್ಕಿ ಯಾದವ್ ಪರವಾಗಿ ಮಲ್ಹಾನಿ ಕ್ಷೇತ್ರದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದರು. ಇದು 2022ರ ವಿಧಾನಸಭೆ ಚುನಾವಣೆಗೆ ಕೊನೆಯ ಹಂತದ ಚುನಾವಣಾ ರ‍್ಯಾಲಿಯಾಗಿದೆ. ಇದನ್ನೂ ಓದಿ: ಆಂಬ್ಯುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!
ಶನಿವಾರ ಸಂಜೆ ಉತ್ತರ ಪ್ರದೇಶದಲ್ಲಿ 2 ತಿಂಗಳ ಕಾಲ ನಡೆದ ಪ್ರಚಾರ ಅಂತ್ಯಗೊಂಡಿತು. ಮಾರ್ಚ್ 7ರಂದು ಉತ್ತರಪ್ರದೇಶದಲ್ಲಿ ಕೊನೆಯ ಹಂತದ ಮತದಾನ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: ಬಿಎಸ್ ಯಡಿಯೂರಪ್ಪಗೆ ಗುರುಬಸವಶ್ರೀ ಪ್ರಶಸ್ತಿ ಪ್ರದಾನ