ಲಕ್ನೋ: ಉತ್ತರ ಪ್ರದೇಶದಲ್ಲಿ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಈಗ ಕಡಿಮೆ ಅಂತರದಲ್ಲಿ ಸೋತ ಮತ್ತು ಜಯಗಳಿಸಿದ ಕ್ಷೇತ್ರಗಳನ್ನು ಅಧ್ಯಯನ ಮಾಡಲು ಮುಂದಾಗಿದೆ.
ಉತ್ತರ ಪ್ರದೇಶ ಸರ್ಕಾರ ರಚನೆ ಮತ್ತು ಎಂಎಲ್‌ಸಿ ಚುನಾವಣೆ ಮುಕ್ತಾಯವಾದ ಬಳಿಕ ಬಿಜೆಪಿ ಸೋಲಿನ ವಿಶ್ಲೇಷಣೆ ನಡೆಸಲಿದೆ.
2017ರ ಚುನಾವಣೆ ನಡೆದ ಬಳಿಕ ಕಡಿಮೆ ಅಂತರದಲ್ಲಿ ಸೋತ ಮತ್ತು ಗೆದ್ದ ಕ್ಷೇತ್ರಗಳ ಚುನಾವಣೆ ನಡೆಸಿತ್ತು. ಈ ಕ್ಷೇತ್ರಗಳಿಗೆ ವಿಶೇಷ ಗಮನ ನೀಡಲಾಗಿತ್ತು. ಈಗಲೂ ನಾವು ಇದನ್ನು ಮುಂದುವರೆಸುತ್ತೇವೆ ಎಂದು ಉತ್ತರ ಪ್ರದೇಶದ ಬಿಜೆಪಿ ಉಪಾಧ್ಯಕ್ಷ ವಿಜಯ್ ಬಹದ್ದೂರ್ ತಿಳಿಸಿದ್ದಾರೆ.
ಈ ವಿಶ್ಲೇಷಣೆಯಿಂದ ಕಳೆದ ಬಾರಿ ಸೋತಿದ್ದ 72 ಕ್ಷೇತ್ರಗಳ ಪೈಕಿ 26ರಲ್ಲಿ ಜಯಗಳಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ 18 ಬಿಜೆಪಿ ಅಭ್ಯರ್ಥಿಗಳು 5 ಸಾವಿರ ಮತಗಳ ಅಂತರದಿಂದ ಸೋತಿದ್ದರೆ 6 ಅಭ್ಯರ್ಥಿಗಳು 1 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಅನೇಕ ಸುಳ್ಳುಗಳನ್ನು ಬಿಂಬಿಸಲಾಗಿದೆ: ಒಮರ್ ಅಬ್ದುಲ್ಲಾ
ಕಾಂಗ್ರೆಸ್ ಪಕ್ಷದಂತೆ ರಾಜ್ಯದ ಅಧ್ಯಕ್ಷರ ಮೇಲೆ ಹೊಣೆ ಹೊರಿಸಿ ಅವರಿಂದ ರಾಜೀನಾಮೆ ಪಡೆಯುವುದಿಲ್ಲ. ನಾವು ಬೂತ್ ಮಟ್ಟಕ್ಕೆ ಹೋಗಿ ಸೋಲಿಗೆ ಕಾರಣ ಹುಡುಕುತ್ತೇವೆ. ಹಿನ್ನೆಡೆಗೆ ಕಾರಣರದವರನ್ನು ಸೋಲಿಗೆ ಉತ್ತರದಾಯಿಗಳನ್ನಾಗಿ ಮಾಡುತ್ತೇವೆ ಬಳಿಕ ಬದಲಾವಣೆ ಮಾಡಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದರು.
ಈ ಚುನಾವಣೆಯಲ್ಲಿ ಪೂರ್ವಾಂಚಲ ಭಾಗದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. 2017ರ ಚುನಾವಣೆಯಲ್ಲಿ ಈ ಭಾಗದ 107ರ ಪೈಕಿ 80 ಕ್ಷೇತ್ರಗಳನ್ನು ಬಿಜೆಪಿ ಮತ್ತು ಮಿತ್ರ ಪಕ್ಷಗಳು ಜಯಿಸಿದ್ದವು. ಆದರೆ ಈ ಬಾರಿ ಇದು 63ಕ್ಕೆ ಇಳಿದಿದೆ. ಇದನ್ನೂ ಓದಿ: ಹಳೆಯ ಘಟನೆ ರಿವೀಲ್ – ಬೆಂಗಳೂರಿನಲ್ಲಿ ಕಾಶ್ಮೀರ ಭವನಕ್ಕೆ ಬೆಂಕಿ ಹಚ್ಚಿ ಅಡ್ಡಿ
ಪೂರ್ವ ಭಾಗದಲ್ಲಿರುವ ಪೂರ್ವಾಂಚಲ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದೆ. ನಾವು ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ತೋರಿಸಲು ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇಯನ್ನು ಬಿಜೆಪಿ ತೋರಿಸಿತ್ತು. ಆದರೆ ಈ ಎಕ್ಸ್‌ಪ್ರೆಸ್‌ವೇ ಸಂಚರಿಸುವ 8 ಜಿಲ್ಲೆಗಳ ಪೈಕಿ 4 ರಲ್ಲಿ ಸಮಾಜವಾದಿ ಪಕ್ಷ ಜಯಗಳಿಸಿದೆ. ಇದು ಬಿಜೆಪಿಗೆ ಭಾರೀ ತಲೆನೋವು ತಂದಿದೆ.