ಲಕ್ನೋ: ಪರಸ್ಪರ ಪ್ರೀತಿಸಿ ಓಡಿಹೋಗಿದ್ದ ಯುವಕ-ಯುವತಿಗೆ ಠಾಣೆಯಲ್ಲಿ ಪೊಲೀಸರೇ ಅದ್ಧೂರಿಯಾಗಿ ಮದುವೆ ಮಾಡಿಸಿಕೊಟ್ಟ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಬರಾಬಂಕಿಯ ಮೊಹಮ್ಮದ್ ಪುರ್ ಖಲಾ ಪೊಲೀಸ್ ಠಾಣೆಯಲ್ಲಿ ನಡೆದಿದೆ. ವಿನಯ್ ಕುಮಾರ್ ಮತ್ತು ನೇಹ ವರ್ಮಾ ಪರಸ್ಪರ ಪ್ರೀತಿಸಿಸುತ್ತಿದ್ದು, ಇಬ್ಬರ ಮನೆಯವರೂ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರೇಮಿಗಳು ಮನೆ ಬಿಟ್ಟು ಓಡಿಹೋಗಿದ್ದರು.
Advertisement
ಈ ಕುರಿತು ನೇಹಾ ಹಾಗೂ ವಿನಯ್ ಕುಟುಂಬಸ್ಥರು ದೂರು ದಾಖಲಿಸಲು ಮೊಹಮ್ಮದ್ ಪುರ್ ಪೊಲೀಸ್ ಠಾಣೆಗೆ ಹೋಗಿದ್ದರು.
Advertisement
Advertisement
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಪ್ರೇಮಿಗಳು ವಯಸ್ಕರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳಬೇಕೆಂದಿದ್ದರು ಎನ್ನುವುದು ತಿಳಿದುಬಂದಿದೆ. ಬಳಿಕ ಎರಡೂ ಕುಟುಂಬಗಳು ಸಮ್ಮತಿಯ ಮೇರೆಗೆ ಪೊಲೀಸ್ ಠಾಣೆಯಲ್ಲೇ ಮದುವೆ ಏರ್ಪಡಿಸಿದ್ದಾರೆ.
Advertisement
ಎರಡು ದಿನಗಳ ಹಿಂದೆ ಯುವಕ ಮತ್ತು ಯುವತಿ ಇಬ್ಬರೂ ನಾಪತ್ತೆಯಾಗಿದ್ದರು. ಹೀಗಾಗಿ ಅವರ ಪೋಷಕರು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ಅವರಿಬ್ಬರೂ ವಯಸ್ಕರಾಗಿರುವುದು ತಿಳಿದುಬಂತು. ಈ ಹಿನ್ನೆಲೆಯಲ್ಲಿ ಇಬ್ಬರ ಮನೆಯವರನ್ನು ಒಪ್ಪಿಸಿ ಮದುವೆ ಮಾಡಿಸಲಾಯಿತು ಅಂತ ಬರಾಬಂಕಿ ಪೊಲೀಸ್ ಠಾಣೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ದಿಗಂಬರ ಕುಶ್ವಾಹ ತಿಳಿಸಿದ್ದಾರೆ.
Barabanki: Police arranged wedding of a couple at Mohammadpur Khala Police Station premises. (25.03.2018) pic.twitter.com/VbhAz97If0
— ANI UP/Uttarakhand (@ANINewsUP) March 25, 2018