ಅಯೋಧ್ಯೆ (ಉತ್ತರ ಪ್ರದೇಶ): ಶ್ರೀರಾಮಲಲ್ಲಾ (Ramlalla) ಪ್ರಾಣಪ್ರತಿಷ್ಠಾಪನೆಗೆ ಕೆಲವೇ ಗಂಟೆಗಳಿಗೂ ಮುನ್ನ ಅಯೋಧ್ಯೆಗೆ ಭೇಟಿ ನೀಡಿರುವ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಭದ್ರತೆಯನ್ನು ಪರಿಶೀಲಿಸಿದ್ದಾರೆ. ಇದೇ ವೇಳೆ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ಆಗಮಿಸಿರುವ ಸಂತರು ಹಾಗೂ ಧಾರ್ಮಿಕ ಮುಖಂಡರನ್ನೂ ಸ್ವಾಗತಿಸಿದ್ದಾರೆ. ನಿಮ್ಮ ಘನ ಉಪಸ್ಥಿತಿಯು ರಾಮರಾಜ್ಯದೆಡೆಗಿನ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಸಂತಸಪಟ್ಟಿದ್ದಾರೆ.
#WATCH | Uttar Pradesh CM Yogi Adityanath greets people as he arrives at Shri Ram Janmabhoomi Temple in Ayodhya
Ayodhya Ram Temple Pran Pratishtha ceremony is taking place today.#RamMandirPranPrathistha pic.twitter.com/T1fzIvQe5j
— ANI (@ANI) January 22, 2024
Advertisement
ಖ್ಯಾತ ನಟರ ಆಗಮನ: ಈಗಾಗಲೇ ಅಮಿತಾಬ್ ಬಚ್ಚನ್, ಚಿರಂಜೀವಿ, ರಾಮ್‌ಚರಣ್, ಪವನ್ ಕಲ್ಯಾಣ್, ಕಂಗನಾ ರಣಾತ್, ಕತ್ರಿನಾ ಕೈಫ್ ಸೇರಿದಂತೆ ಅನೇಕ ನಟ ನಟಿಯರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಕ್ರೀಡಾ ತಾರೆ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ವೆಂಕಟೇಶ್ ಪ್ರಸಾದ್, ಆರ್.ಅಶ್ವಿನ್, ಸೈನಾ ನೆಹ್ವಾಲ್ ಸೇರಿದಂತೆ ಅನೇಕರು ಅಯೋಧ್ಯೆಗೆ ಆಗಮಿಸಿದ್ದು, ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಇದನ್ನೂ ಓದಿ: ರಾಮಲಲ್ಲಾ ಆಸೀನರಾದ ತಕ್ಷಣ ಎಲ್ಲಾ ಕಷ್ಟಗಳು ಕೊನೆಗೊಳ್ತವೆ: ಆಚಾರ್ಯ ಸತ್ಯೇಂದ್ರ ದಾಸ್
Advertisement
Advertisement
ವಿದೇಶಗಳಲ್ಲಿಯೂ ಸಂಭ್ರಮ: ರಾಮಲಲ್ಲಾ ಪ್ರಾಣಪ್ರತಿಷ್ಠೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿರುವ ಶ್ರೀರಾಮನ ಭಕ್ತರು ಕೊಂಡಾಡುತ್ತಿದ್ದಾರೆ. ಯುಎಸ್‌ನ ಟೈಮ್ಸ್‌ಸ್ಕ್ವೇರ್‌ನಲ್ಲಿ ನೇರ ಪ್ರಸಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಪ್ಯಾರಿಸ್, ಮೆಕ್ಸಿಕೋ ದೇಶಗಳಲ್ಲೂ ಭಾರತೀಯ ಮೂಲಕದ ಶ್ರೀರಾಮನ ಭಕ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಹೊತ್ತಲ್ಲೇ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಮತ್ತೊಂದು ರಾಮನ ಮೂರ್ತಿ ಪ್ರತಿಷ್ಠಾಪನೆ
Advertisement
ಅಯೋಧ್ಯೆಯಲ್ಲಿಂದು ಮೋದಿ:
ಬೆಳಗ್ಗೆ 10.25: ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮನ
ಬೆಳಗ್ಗೆ 10.55: ರಾಮಜನ್ಮಭೂಮಿ ಆವರಣ ತಲುಪಲಿರುವ ಹೆಲಿಕಾಪ್ಟರ್
ಬೆಳಗ್ಗೆ 11 ರಿಂದ ಮಧ್ಯಾಹ್ನ 12: ರಾಮಮಂದಿರದ ವೀಕ್ಷಣೆ ಮಾಡಲಿರುವ ಪ್ರಧಾನಿ
ಮಧ್ಯಾಹ್ನ 12.05-12.55: ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ ಮೋದಿ. ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿ.
ಮಧ್ಯಾಹ್ನ 1-2: ನರೇಂದ್ರ ಮೋದಿ, ಮೋಹನ್ ಭಾಗವತ್, ಯೋಗಿ ಆದಿತ್ಯನಾಥ್ ಸಾರ್ವಜನಿಕ ಭಾಷಣ
ಮಧ್ಯಾಹ್ನ 2.10: ರಾಮಜನ್ಮಭೂಮಿ ಆವರಣದಲ್ಲಿರುವ ಶಿವ ಮಂದಿರಕ್ಕೆ ಭೇಟಿ, ವಿಶೇಷ ಪ್ರಾರ್ಥನೆ
ಮಧ್ಯಾಹ್ನ 3.30: ಅಯೋಧ್ಯೆಯಿಂದ ಪ್ರಧಾನಿ ನಿರ್ಗಮನ