ಲಕ್ನೋ: ಉತ್ತರ ಪ್ರದೇಶ ಸರ್ಕಾರ ತನ್ನ ಬಜೆಟ್ ನಲ್ಲಿ 450 ಕೋಟಿ ರೂ. ಹಣವನ್ನು ಗೋ ಶಾಲೆಗೆ ಮೀಸಲಿಟ್ಟರೆ ಮದರಸಾಗಳ ಅಭಿವೃದ್ಧಿಗೆ 490 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಹಣಕಾಸು ಸಚಿವ ರಾಜೇಶ್ ಅಗರ್ವಾಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಯಾವುದೇ ವೋಟ್ ಬ್ಯಾಂಕ್ ರಾಜಕೀಯ ಮಾಡದೇ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಇಟ್ಟುಕೊಂಡು ಬಜೆಟ್ ರೂಪಿಸಿದೆ ಎಂದು ಹೇಳಿದರು.
Advertisement
Advertisement
ಈ ಬಾರಿ ಉತ್ತರ ಪ್ರದೇಶ ಸರ್ಕಾರ 4.79 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದೆ. ಕಳೆದ ಬಾರಿ ಉತ್ತರ ಪ್ರದೇಶ ಸರ್ಕಾರ 4.28 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಬಜೆಟ್ ಗಾತ್ರ ಶೇ.12ರಷ್ಟು ಹೆಚ್ಚಿದೆ. ಸತತ ಮೂರನೇ ಬಾರಿಗೆ ತೆರಿಗೆ ಮುಕ್ತ ಬಜೆಟ್ ಮಂಡಿಸಲಾಗಿದೆ.
Advertisement
ಈ ಹಿಂದೆ ಆಡಳಿತ ನಡೆಸಿದ್ದ ಅಖಿಲೇಶ್ ಯಾದವ್, ಮಾಯಾವತಿ ನೇತೃತ್ವದ ಸರ್ಕಾರಗಳು 3 ಲಕ್ಷ ಕೋಟಿ ಮೀರಿ ಬಜೆಟ್ ಮಂಡಿಸಿಯೇ ಇಲ್ಲ. ಬಜೆಟ್ ನಲ್ಲಿ ಒಟ್ಟು ಶೇ.42 ರಷ್ಟು ಹಣವನ್ನು ಇಂಧನ ಮತ್ತು ಲೋಕೋಪಯೋಗಿ ಇಲಾಖೆಗೆ ಮೀಸಲಿಡಲಾಗಿದೆ ಎಂದು ಅಗರ್ವಾಲ್ ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv