ಲಕ್ನೋ: ಬಿಜೆಪಿ ನೇತೃತ್ವದ ಉತ್ತರ ಪ್ರದೇಶದಲ್ಲಿ ಪ್ರತಿದಿನ ಒಬ್ಬ ಸಚಿವ, 2 ಅಥವಾ 3 ಬಿಜೆಪಿ ಶಾಸಕರು ಜನವರಿ 20 ರವರೆಗೆ ರಾಜೀನಾಮೆ ನೀಡುತ್ತಾರೆ ಎಂದು ಧರಂ ಸಿಂಗ್ ಸೈನಿ ಹೇಳಿದರು.
Advertisement
ಬಿಜೆಪಿ ತೊರೆದ ವಿಚಾರವನ್ನು ಮಾಧ್ಯಮಗಳೊಂದಿಗೆ ಬಹಿರಂಗಪಡಿಸಿದ ಅವರು, ಬಿಜೆಪಿಯಲ್ಲಿ ನಾನು ಹೇಳುವುದನ್ನು ಕೇಳುವವರು ಯಾರೂ ಇರಲಿಲ್ಲ. ಹೀಗಾಗಿ ಒಂದು ದಿನ ಸರ್ಕಾರದ ವಿರುದ್ಧ ರಾಜ್ಯದ 140 ಶಾಸಕರು ಧರಣಿ ಕುಳಿತು ಬೆದರಿಕೆ ಹಾಕುವ ಸಮಯ ಬಂದಿದೆ ಎಂದು ಸಿಡಿದರು. ಇದನ್ನೂ ಓದಿ: ಖಾಸಗಿ ಲ್ಯಾಬ್‍ಗಳಲ್ಲೂ ಉಚಿತ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಎಎಪಿ ಆಗ್ರಹ
Advertisement
Advertisement
ಇದೇ ವೇಳೆ ಸಮಾಜವಾದಿ ಪಕ್ಷವನ್ನು ಸೇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಾನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದು, ಶುಕ್ರವಾರ ಹೆಚ್ಚಿನ ಚರ್ಚೆ ನಡೆಸುವುದಾಗಿ ತಿಳಿಸಿದರು. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ
Advertisement
ಯುಪಿಯಲ್ಲಿ ಮೊದಲ ಹಂತದ ಅಸೆಂಬ್ಲಿ ಚುನಾವಣೆಗೆ ಇನ್ನೂ 1 ತಿಂಗಳು ಬಾಕಿ ಉಳಿದಿದೆ. ಆದರೆ ಬಿಜೆಪಿಯಿಂದ ಜಿಗಿದ 9ನೇ ಶಾಸಕ ಸೈನಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಸಂಪುಟಕ್ಕೆ ರಾಜೀನಾಮೆ ನೀಡಿದರು.