ಲಕ್ನೋ: ಉತ್ತರ ಪ್ರದೇಶ (Uttar Pradesh) ಸರ್ಕಾರ ಹಲಾಲ್ (Halal) ಟ್ಯಾಗ್ ಹೊಂದಿರುವ ಆಹಾರ ಉತ್ಪನ್ನಗಳನ್ನು ನಿಷೇಧಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟದ ಮೇಲೆ ನಿಷೇಧ ಹೇರಲಾಗಿದೆ ಎಂದು ಆಹಾರ ಆಯುಕ್ತರ ಕಚೇರಿ ಆದೇಶದಲ್ಲಿ ತಿಳಿಸಿದೆ.
ರಫ್ತಿಗೆ ಉದ್ದೇಶಿಸಿರುವ ಆಹಾರ ಪದಾರ್ಥಗಳಿಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಆಹಾರ ಉತ್ಪನ್ನಗಳ ಹಲಾಲ್ ಪ್ರಮಾಣೀಕರಣವು ಒಂದು ಸಮಾನಾಂತರ ವ್ಯವಸ್ಥೆಯಾಗಿದ್ದು, ಅದು ಆಹಾರ ಪದಾರ್ಥಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಗೊಂದಲವನ್ನು ಸೃಷ್ಟಿಸುತ್ತದೆ. ಆಹಾರ ಕಾನೂನು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಯ ಸೆಕ್ಷನ್ 89 ರ ಅಡಿಯಲ್ಲಿ ಸಮರ್ಥನೀಯವಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಚುನಾವಣೆ ಗೆಲ್ಲಲು ಬಾಬಾನ ಕೈಯಿಂದ ಚಪ್ಪಲಿ ಏಟು ತಿಂದ ಕೈ ಅಭ್ಯರ್ಥಿ
ಆಹಾರ ಪದಾರ್ಥಗಳ ಗುಣಮಟ್ಟವನ್ನು ನಿರ್ಧರಿಸುವ ಹಕ್ಕು ಈ ಕಾಯಿದೆಯ ಸೆಕ್ಷನ್ 29 ರಲ್ಲಿ ನೀಡಲಾದ ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ಮಾತ್ರ ಇರುತ್ತದೆ. ಅವರು ಕಾಯಿದೆಯ ನಿಬಂಧನೆಗಳ ಪ್ರಕಾರ ಸಂಬಂಧಿತ ಮಾನದಂಡಗಳನ್ನು ಪರಿಶೀಲಿಸುತ್ತಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
“ನಕಲಿ” ಹಲಾಲ್ ಪ್ರಮಾಣಪತ್ರಗಳನ್ನು ಒದಗಿಸುವ ಮೂಲಕ ಮಾರಾಟ ಹೆಚ್ಚಿಸುವುದು, ಜನರ ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳುವ ಆರೋಪದ ಮೇಲೆ ಕಂಪನಿಯೊಂದರ ಮತ್ತು ಇತರ ಕೆಲವು ಸಂಸ್ಥೆಗಳ ವಿರುದ್ಧ ಪೊಲೀಸ್ ಪ್ರಕರಣವನ್ನು ದಾಖಲಿಸಿದ ನಂತರ ಈ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಟೀಂ ಇಂಡಿಯಾ ಪ್ರಾಕ್ಟೀಸ್ ಜೆರ್ಸಿ, ಮೆಟ್ರೋ ಸ್ಟೇಷನ್‍ಗೂ ಕೇಸರಿ ಬಣ್ಣ- ಕೇಂದ್ರದ ವಿರುದ್ಧ ದೀದಿ ವಾಗ್ದಾಳಿ
ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಚೆನ್ನೈ, ಜಮಿಯತ್ ಉಲಮಾ-ಇ-ಹಿಂದ್ ಹಲಾಲ್ ಟ್ರಸ್ಟ್ ದೆಹಲಿ, ಹಲಾಲ್ ಕೌನ್ಸಿಲ್ ಆಫ್ ಇಂಡಿಯಾ ಮುಂಬೈ, ಜಮಿಯತ್ ಉಲಮಾ ಮಹಾರಾಷ್ಟ್ರ ಮತ್ತು ಇತರ ಸಂಸ್ಥೆಗಳಿಗೆ ಹಲಾಲ್ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಮಾರಾಟವನ್ನು ಹೆಚ್ಚಿಸಲು ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ನಿರ್ದಿಷ್ಟ ಧರ್ಮದ ಗ್ರಾಹಕರು ಎಂದು ಯುಪಿ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಈ ಕಂಪನಿಗಳು ಹಣಕಾಸಿನ ಲಾಭಕ್ಕಾಗಿ ವಿವಿಧ ಕಂಪನಿಗಳಿಗೆ ನಕಲಿ ಹಲಾಲ್ ಪ್ರಮಾಣಪತ್ರಗಳನ್ನು ನೀಡಿದ್ದು, ಸಾಮಾಜಿಕ ದ್ವೇಷ ಮಾತ್ರವಲ್ಲದೆ ಸಾರ್ವಜನಿಕ ನಂಬಿಕೆಯನ್ನು ಉಲ್ಲಂಘಿಸುತ್ತಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದರೆ ಈ ಆರೋಪಗಳನ್ನು ಜಮಿಯತ್ ಉಲಮಾ-ಇ-ಹಿಂದ್ ಹಲಾಲ್ ಟ್ರಸ್ಟ್ ತಳ್ಳಿಹಾಕಿದೆ. ಇದು ಆಧಾರರಹಿತ ಆರೋಪ ಎಂದು ಟ್ರಸ್ಟ್ ತಿಳಿಸಿದೆ. ಇದನ್ನೂ ಓದಿ: ಫ್ಯಾಶನ್ ಬಳೆ ತೊಟ್ಟಿದ್ದಕ್ಕೆ ಪತ್ನಿಗೆ ಬೆಲ್ಟ್‌ನಲ್ಲಿ ಥಳಿಸಿದ ಪತಿ!