ಲಕ್ನೋ: ಬಿಜೆಪಿ ಮುಖಂಡರೊಬ್ಬರ ಮಗ ತನ್ನ ನೆರೆ ಮನೆಯವರ ಜೊತೆ ತಮ್ಮ ಮನೆಯಲ್ಲಿ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾಗ ಗುಂಡು ತಗುಲಿ 10 ವಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ ಕರಾರಿಯಲ್ಲಿ ನಡೆದಿದೆ.
ಕಣ್ಣಾಮುಚ್ಚಾಲೆ ಆಟದಲ್ಲಿ ಲೋಡೆಡ್ ಗನ್ ಬಳಸಿದ 11 ವರ್ಷದ ಬಾಲಕ, ಹತ್ತು ವರ್ಷದ ಬಾಲಕನನ್ನು ಗುಂಡಿಕ್ಕಿ ಕೊಂದಿದ್ದು, ಆಕಸ್ಮಿಕವಾಗಿ ಈ ಘಟನೆ ಸಂಭವಿಸಿದೆ ಎಂದು ಬಾಲಕನ ಕುಟುಂಬ ಹೇಳುತ್ತಿದೆ. ಶನಿವಾರ ಸಂಜೆ ಕರಾರಿ ಪೊಲೀಸ್ ವೃತ್ತದಲ್ಲಿ ಈ ಘಟನೆ ನಡೆದಿದೆ. ಆರೋಪಿ ಬಾಲಕ ಸ್ಥಳೀಯ ರಾಜಕಾರಣಿಯೊಬ್ಬರ ಮಗ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಮ್ಮ ಸರ್ಕಾರ ಸಮರ್ಥವಾಗಿದೆ, ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರಿಕೆ ವಹಿಸುತ್ತೇವೆ: ಸಿ.ಪಿ.ಯೋಗೇಶ್ವರ್
Advertisement
Advertisement
ಕೌಶಾಂಬಿ ಪೊಲೀಸ್ ವರಿಷ್ಠಾಧಿಕಾರಿ(ಎಸ್‍ಪಿ) ಪಿ.ಹೇಮರಾಜ್ ಮೀನಾ ಈ ಕುರಿತು ಮಾಹಿತಿ ಕೊಟ್ಟಿದ್ದು, ಘಟನೆ ನಡೆದ ಮನೆ ರಾಜಕೀಯ ಪಕ್ಷದ ಪದಾಧಿಕಾರಿಗೆ ಸೇರಿದ್ದು, ಆತ ಆರೋಪಿ ಬಾಲಕನ ತಂದೆಯಾಗಿದ್ದಾರೆ. ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಪಿಸ್ತೂಲ್ ಹೊಂದಿದ್ದ ತಂದೆಯ ಮಗ, ನೆರೆಮನೆಯ 10 ವರ್ಷದ ಬಾಲಕ ಮತ್ತು ಒಂಬತ್ತು ವರ್ಷದ ಬಾಲಕ ಸೇರಿದಂತೆ ಮೂವರು ಮಕ್ಕಳು ಇದ್ದರು. ಮೂವರು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದರು ಎಂದು ವಿವರಿಸಿದರು.
Advertisement
ಈ ನಡುವೆ ಗುಂಡಿನ ಸದ್ದು ಕೇಳಿ ಬಂದಿದೆ. ಅದಕ್ಕೆ ಅಕ್ಕಪಕ್ಕದವರು ಒಳಗೆ ಓಡಿ ಬಂದು ನೋಡಿದಾಗ 10 ವರ್ಷದ ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಗುಂಡು ಹಾರಿಸಿದ ಬಾಲಕ ಜೋರಾಗಿ ಅಳುತ್ತಿರುವುದು ಕಂಡುಬಂದಿದೆ. ಮೂರನೇ ಮಗು ಹಾಸಿಗೆಯ ಕೆಳಗೆ ಅಡಗಿಕೊಂಡಿತ್ತು ಎಂದು ಹೇಳಿದರು. ಇದನ್ನೂ ಓದಿ: ಭಾವನಾತ್ಮಕ ವಿಷಯ ಕೆದಕಿ ಕೆಲ ಪಕ್ಷಗಳು ರಾಜಕೀಯ ಲಾಭ ಪಡೆಯಲು ಹೊರಟಿವೆ: ಹೆಚ್‍ಡಿಕೆ ಕಿಡಿ
Advertisement
ಬಾಲಕ ಕಬೋರ್ಡ್‍ನಿಂದ ಪಿಸ್ತೂಲ್ ತೆಗೆದು ಆಕಸ್ಮಿಕವಾಗಿ ಗುಂಡು ಹಾರಿಸಿದ್ದಾನೆ ಎಂಬುದು ಮೇಲ್ನೋಟಕ್ಕೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಕೂಡ ಭೇಟಿ ನೀಡಿದ್ದು, ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಲಾಗುವುದು. ಘಟನೆ ನಡೆದಾಗ ಆರೋಪಿಗಳ ಪೋಷಕರು ಮನೆಯಲ್ಲಿ ಇರಲಿಲ್ಲ ಎಂದು ತಿಳಿಸಿದರು.
ಮೂವರೂ ಹುಡುಗರು ಸ್ನೇಹಿತರಾಗಿದ್ದರು. ಯಾವಾಗಲೂ ಒಟ್ಟಿಗೆ ಆಟವಾಡುತ್ತಿದ್ದರು ಎಂದು ನೆರೆಮನೆಯವರು ನಮಗೆ ಮಾಹಿತಿ ಕೊಟ್ಟಿದ್ದಾರೆ ಎಂದರು.