ರಣ ಬಿಸಿಲಿಗೆ ಕಂಗೆಟ್ಟಿದ್ದ ಬೀದರ್‌ಗೆ ತಂಪೆರೆದ ಅಕಾಲಿಕ ಮಳೆ

Public TV
1 Min Read
Bidar rain

– ಚಿಕ್ಕಬಳ್ಳಾಪುರದಲ್ಲೂ ಮೊದಲ ಮಳೆಯ ಆರ್ಭಟ

ಬೀದರ್: ರಣ ಬಿಸಿಲಿನಿಂದ ಕಂಗೆಟ್ಟಿದ್ದ ಬೀದರ್ (Bidar) ಜನರಿಗೆ ಅಕಾಲಿಕ ಮಳೆ ಇಂದು ತಂಪೆರೆದಿದೆ.

ಇಂದು ಜಿಲ್ಲೆಯಲ್ಲಿ ಗುಡುಗು, ಸಿಡಿಲು ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಬೀದರ್ ನಗರ ಸೇರಿ ಜಿಲ್ಲೆಯಾದ್ಯಂತ ಕೆಲಕಾಲ ವರುಣ ಅಬ್ಬರಿಸಿದ್ದಾನೆ. ಸದ್ಯ ಜಿಲ್ಲೆಯಲ್ಲಿ ಜೋರು ಬಿರುಗಾಳಿ ಸಹಿತ ತುಂತುರು ಮಳೆಯಿದ್ದು, ದಟ್ಟವಾಗಿ ಮೋಡ ಕವಿದ ವಾತಾವರಣವಿದೆ.

ಇಂದು ಸೇರಿದಂತೆ ಇನ್ನೆರಡು ದಿನಗಳ ಕಾಲ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ.ಇದನ್ನೂ ಓದಿ: 25 ಸಾವಿರ ಶಿಕ್ಷಕರ ವಜಾ – ಜಡ್ಜ್‌ಗಳ ಮನೆಯಲ್ಲಿ ಹಣ ಪತ್ತೆಯಾದ್ರೆ ವರ್ಗಾವಣೆ, ಶಿಕ್ಷಕರ ವಜಾ ಯಾಕೆ? – ಮಮತಾ ಬ್ಯಾನರ್ಜಿ ಪ್ರಶ್ನೆ

ಚಿಕ್ಕಬಳ್ಳಾಪುರದಲ್ಲೂ ಮೊದಲ ಮಳೆಯ ಅಬ್ಬರ:
ಚಿಕ್ಕಬಳ್ಳಾಪುರ (Chikkaballapura) ಸೇರಿ ಜಿಲ್ಲೆಯ ಹಲವು ಕಡೆ ಇಂದು ಮೊದಲ ಮಳೆ ಭರ್ಜರಿಯಾಗಿ ಅಬ್ಬರಿಸಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್, ಚದಲಪುರ ಸುತ್ತಮುತ್ತಲೂ ಭರ್ಜರಿ ಮಳೆಯಾಗಿದೆ.

ಜಿಲ್ಲೆಯ ಗೌರಿಬಿದನೂರು ಭಾಗದಲ್ಲೂ ಮಳೆಯಾಗಿದೆ. ಧಾರಕಾರ ಮಳೆಗೆ ಬಿಸಿಲಿನಿಂದ ಬಸವಳಿದ್ದ ಜನರಿಗೆ ತಂಪೆರೆದಂತಾಗಿದೆ. ರೈತರಿಗೂ ಸಹ ಮೊದಲ ಮಳೆ ಖುಷಿ ತಂದಿದೆ. ಚದಲಪುರ ವೃತ್ತದ ಬಳಿ ಹೆದ್ದಾರಿ ಮೇಲೆ ಮಳೆ ನೀರು ನಿಂತು ವಾಹನ ಸವಾರರು ಸಹ ಪರದಾಡುವಂತಾಗಿತ್ತು.ಇದನ್ನೂ ಓದಿ: ಬೆಲೆ ಏರಿಕೆ ವಿರುದ್ಧ ಕೇಸರಿ ಕಹಳೆ – ಅಹೋರಾತ್ರಿ ಧರಣಿ ಮುಕ್ತಾಯ

Share This Article