ಆಸ್ಟ್ರೇಲಿಯಾದ ಬಳಿಕ ನ್ಯೂಜಿಲೆಂಡಿನಲ್ಲಿ ಕಮಾಲ್ – ಸರಣಿ ಗೆದ್ದು 2014ರ ಸೋಲಿಗೆ ಸೇಡು ತೀರಿಸಿದ ಭಾರತ

Public TV
2 Min Read
rohith sharma karthik 1 1

ಮೌಂಟ್ ಮೌಂಗಾನೆ: ಆಸ್ಟ್ರೇಲಿಯಾ ವಿರುದ್ಧ ಏಕದಿನ, ಟೆಸ್ಟ್ ಐತಿಹಾಸಿಕ ಸರಣಿ ಗೆದ್ದ ಟೀಂ ಇಂಡಿಯಾ ಈಗ ನ್ಯೂಜಿಲೆಂಡ್ ವಿರುದ್ಧ ಇನ್ನೂ ಎರಡು ಪಂದ್ಯಗಳಿರುವಂತೆಯೇ ಏಕದಿನ ಪಂದ್ಯಗಳ ಸರಣಿಯನ್ನು ಗೆದ್ದು ಬೀಗಿದೆ.

ಗೆಲ್ಲಲು 244 ರನ್ ಗಳ ಗುರಿಯನ್ನು ಪಡೆದ ಭಾರತ ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 245 ರನ್ ಹೊಡೆದು 7 ವಿಕೆಟ್ ಗಳಿಂದ ಗೆದ್ದು ಸಂಭ್ರಮಿಸಿದೆ. ಈ ಮೂಲಕ 2014ರ ಸರಣಿಯ ಸೋಲಿಗೆ ಸೇಡನ್ನು ತೀರಿಸಿದೆ. 2014ರ ಪ್ರವಾಸದಲ್ಲಿ ನ್ಯೂಜಿಲೆಂಡ್ 4-0 ಅಂತರದಿಂದ ಭಾರತವನ್ನು ಮಣಿಸಿ ಸರಣಿ ಜಯಿಸಿತ್ತು.

team india 1 2

ತಂಡದ ಮೊತ್ತ 39 ರನ್ ಗಳಿಸಿದ್ದಾಗ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿದ್ದಾಗ ರೋಹಿತ್ ಶರ್ಮಾ ಮತ್ತು ಕೊಹ್ಲಿ ಇನ್ನಿಂಗ್ಸ್ ಕಟ್ಟಿದ್ದರು. ಇವರಿಬ್ಬರು ಎರಡನೇ ವಿಕೆಟ್ ಗೆ 113 ರನ್ ಜೊತೆಯಾಟವಾಡಿ ಭದ್ರ ಬುನಾದಿ ಹಾಕೊಟ್ಟರು. ಕೊನೆಯಲ್ಲಿ ಕಾರ್ತಿಕ್ ಮತ್ತು ಅಂಬಾಟಿ ರಾಯಡು ಮುರಿಯದ ನಾಲ್ಕನೇ ವಿಕೆಟ್ ಗೆ 77 ರನ್ ಗಳ ಜೊತೆಯಾಟ ನಡೆಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಶಿಖರ್ ಧವನ್ 28 ರನ್, ರೋಹಿತ್ ಶರ್ಮಾ 62 ರನ್(77 ಎಸೆತ, 3 ಬೌಂಡರಿ, 2 ಸಿಕ್ಸರ್), ವಿರಾಟ್ ಕೊಹ್ಲಿ 60 ರನ್(74 ಎಸೆತ, 6 ಬೌಂಡರಿ, 1 ಸಿಕ್ಸರ್) ಅಂಬಾಟಿ ರಾಯುಡು ಔಟಾಗದೇ 40 ರನ್(42 ಎಸೆತ, 5 ಬೌಂಡರಿ, 1 ಸಿಕ್ಸರ್), ದಿನೇಶ್ ಕಾರ್ತಿಕ್ ಔಟಾಗದೇ 38 ರನ್(38 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದರು.

kohli 1

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 49 ಓವರ್ ಗಳಲ್ಲಿ 243 ರನ್ ಗಳಿಗೆ ಆಲೌಟ್ ಆಯ್ತು. ರಾಸ್ ಟೇಲರ್ 93 ರನ್(106 ಎಸೆತ, 9 ಬೌಂಡರಿ) ಲಥಾಮ್ 51 ರನ್ (64 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದರು. ಭಾರತದ ಪರ ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತರೆ ಭುವನೇಶ್ವರ್ ಕುಮಾರ್, ಚಹಲ್, ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *