ಬೆಂಗಳೂರು: ಒಟ್ಟು 129 ಪುಟಗಳ ಹೈಕೋರ್ಟ್ ತೀರ್ಪಿನಲ್ಲಿ ಹಿಜಬ್ ವಿವಾದದ ಹಿಂದೆ ಕಾಣದ ಕೈಗಳ ಕೈವಾಡವಿರುವ ಬಗ್ಗೆಯೂ ಪೂರ್ಣ ಪೀಠ ಶಂಕೆ ವ್ಯಕ್ತಪಡಿಸಿದೆ. ಸಮಾಜದ ಸಾಮರಸ್ಯ ಕದಡುವ ಹುನ್ನಾರ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.
126 ಮತ್ತು 127ನೇ ಪುಟದಲ್ಲಿ ದಿಢೀರ್ ಆಗಿ ಈ ವಿವಾದ ಯಾಕೆ ಸೃಷ್ಟಿಯಾಯಿತು ಎಂದು ಹೈಕೋರ್ಟ್‌ಪ್ರಶ್ನಿಸಿದೆ. ಇದನ್ನೂ ಓದಿ: ಹಿಜಬ್ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅತ್ಯಗತ್ಯ: ಹಿರಿಯ ವಕೀಲ ಎ.ಎಂ.ಧಾರ್
Advertisement
Advertisement
ತೀರ್ಪಿನಲ್ಲಿ ಏನಿದೆ?
2004ರಿಂದಲೂ ಸಮವಸ್ತ್ರ ಕಡ್ಡಾಯ ಆದೇಶವಿದ್ದು ಈ ವಿವಾದ ಇದ್ದಕ್ಕಿದ್ದಂತೆ ಚಾಲ್ತಿಗೆ ಬಂದಿದ್ಯಾಕೆ ಎಂದು ಪ್ರಶ್ನಿಸಿದೆ. ಸಮಾಜದಲ್ಲಿ ಶಾಂತಿ ಕದಡುವ ಯತ್ನದ ಬಗ್ಗೆ ಅನುಮಾನವಿದೆ. ಕಾಣದ ಕೈಗಳ ಕೈವಾಡ ಇರುವ ಬಗ್ಗೆ ಶಂಕೆ ಇದೆ. ಇಡೀ ಪ್ರಕರಣದಲ್ಲಿ ನಮಗೆ ದಿಗ್ಬ್ರಮೆ ಆಗುತ್ತಿದೆ. ಇದನ್ನೂ ಓದಿ: ನಾವು ಕುರಾನ್ ಫಾಲೋ ಮಾಡುತ್ತೇವೆ, ನಮ್ಮ ನಿಲುವಿನಲ್ಲಿ ಕಾಂಪ್ರಮೈಸ್ ಇಲ್ಲ: ಆಲಿಯಾ ಅಸ್ಸಾ
Advertisement
Advertisement
ಫೆ. 5ರ ಸುತ್ತೋಲೆಗೆ ಮುನ್ನವೇ ವಿದ್ಯಾರ್ಥಿನಿಯರಿಂದ ಪಿಐಎಲ್ ಸಲ್ಲಿಕೆಯಾಗಿದೆ. 2021ರ ಡಿಸೆಂಬರ್ ಮೊದಲ ವಾರದಲ್ಲೇ ಕಾಲೇಜಲ್ಲಿ ಹಿಜಬ್ ವಿವಾದ ಸೃಷ್ಟಿಗೆ ಯತ್ನ ನಡೆದಿದೆ. ಅರ್ಜಿದಾರರ ಕಾಲೇಜಿನ ಪ್ರಾಂಶುಪಾಲರಿಗೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದ್ದು ಈ ವಿಷಯದಲ್ಲಿ ಸಂಯಮ ಪಾಲಿಸಲು ಬಯಸುತ್ತೇವೆ.