ಚೆನ್ನೈ: ನೆರೆಯ ತಮಿಳುನಾಡಿನಲ್ಲಿ (Tamil Nadu) ಅಕಾಲಿಕ ಮಳೆ (Unseasonal Rain) ಸುರಿಯುತ್ತಿರುವುದರಿಂದ ರಾಜ್ಯ ತತ್ತರಿಸಿ ಹೋಗಿದೆ. ಬುಧವಾರ ರಾತ್ರಿ ನಾಗಪಟ್ಟಿಣಂನಲ್ಲಿ (Nagapattinam) ಸುರಿದ ಭಾರೀ ಮಳೆಯಿಂದಾಗಿ (Rain) ಗುರುವಾಗ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ (Holiday) ಘೋಷಿಸಲಾಗಿದೆ. ತಿರುವರೂರು ಜಿಲ್ಲೆಯಲ್ಲಿಯೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಟ್ವೀಟ್‌ನಲ್ಲಿ ಈ ಬಗ್ಗೆ ತಿಳಿಸಿದ್ದು, ನೈಋತ್ಯ ಬಂಗಾಳ ಕೊಲ್ಲಿಯಲ್ಲಿ, ಶ್ರೀಲಂಕಾ ಕರಾವಳಿಯಿಂದ 80 ಕಿಮೀ ದೂರದಲ್ಲಿ ಮತ್ತು ತಮಿಳುನಾಡಿನ ಕಾರೈಕಲ್‌ನಿಂದ 400 ಕಿಮೀ ದೂರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ ಎಂದು ಹೇಳಿದೆ.
Advertisement
Depression over Southwest BoB lay centered at 2330 IST about 60 km Noetheast of Batticaloa (Sri Lanka) and 400 km Southeast of Karaikal (India). Very likely to move nearly west-southwest and cross Sri Lanka coast between Batticaloa and Trincomalee around early morning of 02 Feb pic.twitter.com/qhb6jJ6T0q
— India Meteorological Department (@Indiametdept) February 1, 2023
Advertisement
ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ ಗುರುವಾರ ಬೆಳಗ್ಗೆ, ದಕ್ಷಿಣ ತಮಿಳುನಾಡಿನ ಅನೇಕ ಸ್ಥಳಗಳಲ್ಲಿ ಮತ್ತು ಉತ್ತರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ 1-2 ಕಡೆಗಳಲ್ಲಿ ಫೆಬ್ರವರಿ 2 ರಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಇದನ್ನೂ ಓದಿ: ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ – ರಥೋತ್ಸವದಲ್ಲಿ ಹರಕೆ ತೀರಿಸಿದ ರೈತ
Advertisement
— Tamilnadu Weather-IMD (@ChennaiRmc) February 1, 2023
Advertisement
ಗುರುವಾರ ಮತ್ತು ಶುಕ್ರವಾರ ಸಮುದ್ರದ ಪರಿಸ್ಥಿತಿ ತುಂಬಾ ಪ್ರಕ್ಷುಬ್ಧವಾಗಿರುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಹೂಡಿಕೆದಾರರ ಹಿತಾಸಕ್ತಿಯೇ ನನಗೆ ಮುಖ್ಯ – 20,000 ಕೋಟಿ ಮೌಲ್ಯದ FPO ಹಿಂಪಡೆದ ಬಳಿಕ ಅದಾನಿ ಮೊದಲ ಪ್ರತಿಕ್ರಿಯೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k