ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಅಭಾವ (Power Shortage) ತೀವ್ರಗೊಂಡಿದ್ದು, ರಾಜ್ಯ ಸರ್ಕಾರ ಸದ್ದಿಲ್ಲದೇ ಅನಧಿಕೃತ ಲೋಡ್ಶೆಡ್ಡಿಂಗ್ (Load Shedding) ಜಾರಿ ಮಾಡಿದೆ. ವಿದ್ಯುತ್ ಅಭಾವದ ನಡುವೆಯೂ ಎಲ್ಲಾ ಎಸ್ಕಾಂಗಳು ಕೈಗಾರಿಕಾ ವಲಯಕ್ಕೆ ಆದ್ಯತೆ ನೀಡಿದ್ದು ಕೃಷಿಕರನ್ನು ಸಂಪೂರ್ಣ ಕಡೆಗಣಿಸಿದೆ. ಗ್ರಾಮೀಣ ಭಾಗ ಮಾತ್ರವಲ್ಲದೇ ನಗರ ಪ್ರದೇಶಗಳಲ್ಲಿಯೂ ಲೋಡ್ಶೆಡ್ಡಿಂಗ್ ಆರಂಭವಾಗಿದೆ.
ಲೋಡ್ಶೆಡ್ಡಿಂಗ್ ವಿರುದ್ಧ ರಾಜ್ಯದ ರೈತರು (Farmers) ಸಿಡಿಯುತ್ತಿದ್ದಾರೆ. ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಹಾಸನ, ಚಾಮರಾಜನಗರ, ಬೆಳಗಾವಿಯ ಚಿಕ್ಕೋಡಿ ಸೇರಿ ಹಲವೆಡೆ ರೈತರು ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
Advertisement
Advertisement
ನಮಗೆ ಉಚಿತ ವಿದ್ಯುತ್ (Free Electricity) ಬೇಡ. ಬೆಳೆ ಉಳಿಸಿಕೊಳ್ಳಲು ವಿದ್ಯುತ್ ನೀಡಿ ಎಂದು ಆಗ್ರಹಿಸಿದ್ದಾರೆ. ಇದಕ್ಕೆ ವಿಪಕ್ಷ ಬಿಜೆಪಿಯೂ (BJP) ಸಾಥ್ ನೀಡಿದೆ. ಚಿಕ್ಕಬಳ್ಳಾಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಬಿಜೆಪಿ ನಾಯಕರು ಎತ್ತಿನಗಾಡಿಯಲ್ಲಿ ಸಂಚರಿಸಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್ಗೆ ಲೀಡ್ ಕೊಟ್ಟ ಕ್ಷೇತ್ರದಲ್ಲಿ ಮಾತ್ರ ಕೆಲಸ : ಮಾಗಡಿ ಶಾಸಕ ಬಾಲಕೃಷ್ಣ
Advertisement
ತೀವ್ರ ವಿದ್ಯುತ್ ಸಮಸ್ಯೆ ಇರುವುದನ್ನು ಇಂಧನ ಇಲಾಖೆ (Energy Department) ಒಪ್ಪಿಕೊಂಡಿದ್ದು, ವಿಪಕ್ಷಗಳ ಟೀಕೆ ಬೆನ್ನಲ್ಲೇ ಅಂಕಿ ಅಂಶ ಬಹಿರಂಗಮಾಡಿದೆ.
Advertisement
ಇಂಧನ ಇಲಾಖೆ ಹೇಳಿದ್ದೇನು?
ಮುಂಗಾರು ಕೊರತೆಯಿಂದ ತೀವ್ರ ವಿದ್ಯುತ್ ಸಮಸ್ಯೆಯಾಗಿದ್ದು ಪವನ ವಿದ್ಯುತ್, ಸೋಲಾರ್, ಜಲ ವಿದ್ಯುತ್, ಉಷ್ಣಸ್ಥಾವರಗಳಲ್ಲಿ ಉತ್ಪಾದನೆ ಕುಂಠಿತವಾಗಿದೆ. ಪ್ರಸ್ತುತ ನಿತ್ಯ 15 ಸಾವಿರ ಮೆಗಾವ್ಯಾಟ್ ವಿದ್ಯುತ್ಗೆ ಬೇಡಿಕೆ ಇದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 9,032 ಮೆಗಾವ್ಯಾಟ್ಗೆ ಬೇಡಿಕೆ ಇತ್ತು.
ರಾಜ್ಯದಲ್ಲಿ ನಿತ್ಯ 10 ಸಾವಿರ ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದ್ದು ಕೇಂದ್ರ ಮತ್ತು ಹೊರ ರಾಜ್ಯಗಳಿಂದ 3 ಸಾವಿರ ಮೆಗಾವ್ಯಾಟ್ ಪೂರೈಕೆ ಆಗುತ್ತಿದೆ. ನಿತ್ಯ 2 ಸಾವಿರ ಮೆಗಾವ್ಯಾಟ್ನಷ್ಟು ವಿದ್ಯುತ್ ಕೊರತೆಯಿದೆ. ಅಲ್ಪಾವದಿಯ ಟೆಂಡರ್ ಮೂಲಕ ವಿದ್ಯುತ್ ಖರೀದಿಗೆ ಪ್ರಯತ್ನ ನಡೆಯುತ್ತಿದ್ದು, ಪ್ರತಿ ಜಿಲ್ಲೆಗೂ ನೋಡಲ್ ಅಧಿಕಾರಿ ಮೂಲಕ ವಿದ್ಯುತ್ ಹಂಚಿಕೆಗೆ ಚಿಂತನೆ ನಡೆದಿದೆ.
ಬರದ ಬೇಗೆಯಲ್ಲಿ ಬಸವಳಿಯುತ್ತಿದ್ದ ರಾಜ್ಯದ ಜನತೆಗೆ, ಈಗ ಗಾಯದ ಮೇಲೆ ಉಪ್ಪು ಸುರಿದಂತೆ ಲೋಡ್ ಶೆಡ್ಡಿಂಗ್ ಹೊರೆಯನ್ನು ಹೊರೆಸಿದೆ @INCKarnataka ಸರ್ಕಾರ.
ಗ್ರಾಮೀಣ ಪ್ರದೇಶದಲ್ಲಿ ರೈತರ ಪಂಪ್ಸೆಟ್ಗಳಿಗೆ ದಿನಕ್ಕೆ ಒಂದು ಗಂಟೆ ಸಹ ಮೂರು ಫೇಸ್ ವಿದ್ಯುತ್ ಪೂರೈಸದೆ, ರೈತರ ಹೊಲದಲ್ಲಿನ ಬೆಳೆಗಳು ಒಣಗುತ್ತಿವೆ.
ಅತ್ತ ಮೂರು ಫೇಸ್ ವಿದ್ಯುತ್… pic.twitter.com/PK6N4eMDXN
— BJP Karnataka (@BJP4Karnataka) October 11, 2023
ವಿದ್ಯುತ್ ಬಳಕೆ ಅಂಕಿ ಅಂಶ
* ಒಟ್ಟು ಗೃಹ ಬಳಕೆದಾರರ ಸಂಖ್ಯೆ – 2 ಕೋಟಿ
* ಉಚಿತ ವಿದ್ಯುತ್ ಫಲಾನುಭವಿಗಳು – 1.50 ಕೋಟಿ
* ಕೃಷಿ ಪಂಪ್ಸೆಟ್ ಸಂಖ್ಯೆ – 32 ಲಕ್ಷ
* ಬೃಹತ್ ಕೈಗಾರಿಕೆಗಳ ಸಂಖ್ಯೆ – 15,147
* ಸಣ್ಣ ಕೈಗಾರಿಕೆಗಳ ಸಂಖ್ಯೆ – 5.35 ಲಕ್ಷ
* 1.50 ಲಕ್ಷ ಹೊಸ ಪಂಪ್ಸೆಟ್ಗೆ ಸಂಪರ್ಕ ಸಿಕ್ಕಿಲ್ಲ
Web Stories