ಲಕ್ನೋ: ಮತ್ತೊಬ್ಬ ವ್ಯಕ್ತಿಯೊಂದಿಗೆ ಸೇರಿ ಮಾವನೊಬ್ಬ ತನ್ನ ಸ್ವಂತ ಸೊಸೆಯ ಮೇಲೆಯೇ ಅತ್ಯಾಚಾರ ನಡೆಸಿರುವುದಾಗಿ ಆರೋಪ ಕೇಳಿಬಂದಿತ್ತು. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಸ್ವಂತ ಮಾವ ಸೊಸೆಯ ಮೇಲೆ ಅತ್ಯಾಚಾರ ನಡೆಸುವುದು ಅಸಹಜ, ಇತ್ತೀಚೆಗೆ ವ್ಯಕ್ತಿಯ ಪ್ರತಿಷ್ಠೆ ಘಾಸಿಗೊಳಿಸುವ ಉದ್ದೇಶದಿಂದ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ ಎಂಬುದನ್ನು ಪರಿಗಣಿಸಿ, ಆರೋಪಿ ಸ್ಥಾನದಲ್ಲಿದ್ದ ಮಾವನಿಗೆ ಅಲಹಾಬಾದ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
Advertisement
ಸೊಸೆಯು ತನ್ನ ಸ್ವಂತ ಮಾವ ಹಾಗೂ ಮತ್ತೊಬ್ಬ ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಬಳಿಕ ನ್ಯಾಯಮೂರ್ತಿ ಅಜಿತ್ ಸಿಂಗ್ ಅವರು ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಇದನ್ನೂ ಓದಿ: ವಿಮಾನ ಪತನದ ಸ್ಥಳದಲ್ಲಿ 16 ಮೃತದೇಹ ಪತ್ತೆ- ಪ್ರಯಾಣಿಕರೆಲ್ಲರೂ ಮೃತಪಟ್ಟಿರುವ ಶಂಕೆ
Advertisement
ಅರ್ಜಿದಾರರ ಪೂರ್ವಾಪರ ಹಾಗೂ ಆರೋಪಗಳ ಸ್ವರೂಪವನ್ನು ಪರಿಗಣಿಸಿ, ಮಾವ ತನ್ನ ಸ್ವಂತ ಸೊಸೆಯ ಮೇಲೆ ಅತ್ಯಾಚಾರ ಎಸಗುವುದು ಅಸಹಜ ಎಂದು ಪರಿಗಣಿಸಿ ಈ ಆದೇಶ ನೀಡಿದೆ. ಅಲ್ಲದೆ ಭಾರತೀಯ ಸಂಸ್ಕೃತಿಯಲ್ಲಿ ಇನ್ನೊಬ್ಬ ವ್ಯಕ್ತಿ ಸಮಾಜದಲ್ಲಿ ತನ್ನ ಪ್ರತಿಷ್ಠೆಯನ್ನು ಘಾಸಿಗೊಳಿಸುವ ಉದ್ದೇಶದಿಂದ ಸುಳ್ಳು ಆರೋಪ ಮಾಡಿರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟು ಕೋರ್ಟ್ ಜಾಮೀನು ನೀಡಿದೆ.
Advertisement
Advertisement
ಈ ಪ್ರಕರಣದಲ್ಲಿ ಅವರ 25 ಸಾವಿರ ವೈಯಕ್ತಿಕ ಬಾಂಡ್ ಇಬ್ಬರ ಶ್ಯೂರಿಟಿ, ತನಿಖಾಧಿಕಾರಿಗಳು ಕರೆದಾಗ ವಿಚಾರಣೆಗೆ ಹಾಜರಾಗಬೇಕೆಂದು ಷರತ್ತು ವಿಧಿಸಿದೆ. ಅರ್ಜಿದಾರರು ತನ್ನ ಮಾನವ ವಿರುದ್ಧ IPC ಸೆಕ್ಷನ್ 376 (ಅತ್ಯಾಚಾರ), 511 (ದಂಡನೀಯ ಅಪರಾದ), 504 (ಶಾಂತಿಭಂಗ, ಉದ್ದೇಶ ಪೂರ್ವಕ ಅವಮಾನ), 506 (ಅಪರಾಧಿ ಭಯೋತ್ಪಾದನೆಗೆ ದಂಡನೆ) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
2018ರ ಪ್ರಕರಣ: ತಾನೂ ಒಬ್ಬಳೇ ಇದ್ದಾಗ ತನ್ನ ಮಾವ ಮತ್ತೊಬ್ಬ ವ್ಯಕ್ತಿಯೊಂದಿಗೆ ಮನೆಗೆ ಬಂದಿದ್ದರು. ಸಹೋದರ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಮಾವ ನಿಂದಿಸಲು ಆರಂಭಿಸಿದ್ದರು. ಬಳಿಕ ಇಬ್ಬರೂ ಆಕೆಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾರೆ ಎಂದು 2018ರಲ್ಲಿ ಅರ್ಜಿದಾರರು ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ನಾಪತ್ತೆಯಾದ ವಿಮಾನ 6 ಗಂಟೆಗಳಲ್ಲಿ ಪತ್ತೆ – ಸಾವು ನೋವಿನ ಬಗ್ಗೆ ತನಿಖೆ
ಈ ಸಂಬಂಧ ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಸಮಾನತೆಯನ್ನೂ ಕೋರಿದ್ದರು. ರಾಜ್ಯದ ವಕೀಲರು ನಿರೀಕ್ಷಣಾ ಜಾಮೀನನ್ನು ವಿರೋಧಿಸಿದ್ದರೇ ಹೊರತು ಸಮಾನತೆಯ ಹಕ್ಕನ್ನು ಪರಿಗಣಿಸಿರಲಿಲ್ಲ. ನಂತರ ಕಕ್ಷಿದಾರರ ವಾದವನ್ನೂ ಆಲಿಸಿದ ನಂತರ ನ್ಯಾಯಾಲಯವು ಷರತ್ತುಗಳಿಗೆ ಒಳಪಟ್ಟು 25 ಸಾವಿರ ಮೊತ್ತದ 2 ಶ್ಯೂರಿಟಿಗಳೊಂದಿಗೆ ವೈಯಕ್ತಿಕ ಬಾಂಡ್ ಅನ್ನು ಆಧರಿಸಿ ಅರ್ಜಿದಾರರಿಗೆ ಶರತ್ತು ಬದ್ಧ ಜಾಮೀನು ನೀಡಿದೆ.
ಅರ್ಜಿದಾರರ ಪರ ವಕೀಲ ಆದಿತ್ಯ ಪ್ರಸಾದ್ ಮಿಶ್ರಾ ವಾದಿಸಿದರು. ಸರ್ಕಾರಿ ವಕೀಲ ಅನಯ್ ಕುಮಾರ್ ಶ್ರೀವಾಸ್ತವ ಪ್ರತಿವಾದಿಯಾಗಿದ್ದರು.